೦೦೨೦. ಇಂದ್ರಗೋಪ-ಪರಿಕ್ಷಿಪ್ತ-ಸ್ಮರತೂಣಾಭ-ಜಂಘಿಕಾ (೪೧), ಗೂಢ ಗುಲ್ಫಾ (೪೨), ಕೂರ್ಮ-ಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ (೪೩), ನಖದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ (೪೪), ಪದ-ದ್ವಯ-ಪ್ರಭಾ-ಜಾಲ-ಪರಾಕೃತ-ಸರೋರುಹಾ (೪೫), ಸಿಂಜಾನ-ಮಣಿ-ಮಂಜೀರ-ಮಂಡಿತ-ಸ್ರೀಪದಾಂಬುಜಾ (೪೬) (ಶ್ರೀ ಲಲಿತಾ ಸಹಸ್ರನಾಮ ೪೧ರಿಂದ ೪೬ನೇ ನಾಮದ ವಿವರಣೆ )

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಇಂದ್ರಗೋಪ-ಪರಿಕ್ಷಿಪ್ತ-ಸ್ಮರತೂಣಾಭ-ಜಂಘಿಕಾ (೪೧), ಗೂಢ ಗುಲ್ಫಾ (೪೨), ಕೂರ್ಮ-ಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ (೪೩), ನಖದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ (೪೪), ಪದ-ದ್ವಯ-ಪ್ರಭಾ-ಜಾಲ-ಪರಾಕೃತ-ಸರೋರುಹಾ (೪೫), ಸಿಂಜಾನ-ಮಣಿ-ಮಂಜೀರ-ಮಂಡಿತ-ಸ್ರೀಪದಾಂಬುಜಾ (೪೬)

೨೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೪೧ರಿಂದ ೪೬
________________________________________

೪೧. ಇಂದ್ರಗೋಪ-ಪರಿಕ್ಷಿಪ್ತ-ಸ್ಮರತೂಣಾಭ-ಜಂಘಿಕಾ

ಸ್ವಯಂಪ್ರಭೆಯ ಮಿಂಚುಹುಳು ತನ್ನಂತಾನೆ ಪಸರಿಸೊ ಹಾಗೆ
ಅಕ್ಷೋಹಿಣಿ ಸೌಂದರ್ಯ ಧಗೆ ನಿನ್ನೊಡೆಯ ಶಿವನ ಗೆಲುವ ಬಗೆ
ಪ್ರೇಮಾಧಿಪತಿ ಮನ್ಮಥ ಬತ್ತಳಿಕೆ, ಹೋಲುವ ಮೀನಖಂಡಗಳೆ
ದಶನಖಬಾಣ ಬತ್ತಳಿಕೆಯ್ಹಿಡಿದೆ ಕಾಮನ ಮದನೋತ್ಸವ ಮಳೆ ||

೪೨. ಗೂಢ ಗುಲ್ಫಾ

ವರ್ಣನಾತೀತ ರೂಪ ಲಹರಿ ದೇವಿ ಸೌಂದರ್ಯ ಭೌತಿಕ
ಹೊರೆಯೊತ್ತೆ ಜಗಭಾರಕೆ ಸುಖಿ ಭಾರಿ ಕಾಲೇರಿ ಚಾಲಕ
ದುಂಡಾದ ವೃತ್ತ ಪುಟ್ಟ ಹಿಮ್ಮಡಿ ನಿಮಿತ್ತ ಭಕ್ತಿಭಾವ ಪುಳಕ
ಮರೆ ಮಾಚಿ ಗೂಢ ಕಾರಣ ನಿಗೂಢ ಸೃಷ್ಟಿ ರಹಸ್ಯಾ ಜಳಕ ||

೪೩. ಕೂರ್ಮ-ಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ

ಜಗತ್ನಿಯಂತ್ರಣ ಜಗ ಭಾರ ಹೊರೆ, ಅಸೀಮ ಬಲ ಪಾದ ನೆಲೆ
ಕಮಾನು ಪಾದ ಅಂಕುಡೊಂಕಿನ ಕಲೆ ಉಬ್ಬಿದ ಕೂರ್ಮ ಸಕಲೆ
ಕಠೋರ ಕವಚ ಕೂರ್ಮಾಸನ ಹಿತ ವಿಶ್ವ ಭಾರ ಹರಡೆ ಕರಾಳ
ಮೃದು ಕಾಲ್ಬೆರಳು ಕಾಪಿಡೆ ಹಗಲಿರುಳು, ಚಿಪ್ಪೊಳ ಸೇರೆ ಸರಳ ||

೪೪. ನಖದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ

ಸುರಾಸುರ ಶಿರಸಾಷ್ಟಾಂಗ ವಂದಿತೆ ಲಲಿತೆ ನಖೋ ಕಿರಣ ಸನ್ಮತಿ
ಪಾದಕಮಲ ನಮಿಸುತೆ ಪ್ರಣತಿ ಕಿರೀಟ ರತ್ನ ಮಂಕಾಗುತ ಸದ್ಗತಿ
ತಮೋಗುಣ, ತೊಳೆ ಅಜ್ಞಾನ ಪೂರ್ಣ, ಪಾದನಖ ಕಿರಣ ಪೂಜಿಸೆ
ಪಾದಕಮಲವೆ ಆಶೀರ್ವದಿಸೆ, ಅಭಯಾ ವರದ ಚತುರ್ದೇವಿ ದೆಸೆ ||

೪೫. ಪದ-ದ್ವಯ-ಪ್ರಭಾ-ಜಾಲ-ಪರಾಕೃತ-ಸರೋರುಹಾ

ಅದ್ವಿತೀಯ ಪಾದಜೋಡಿ, ಪ್ರಭಾವಳಿ ಮೇರು ಕಮಲದ ಮೋಡಿ
ಕಮಲ ಧೂಳಿ ಹೆಕ್ಕಿದ ಬಳಿ ಸೃಷ್ಟಿ ಸ್ಥಿತಿ ಲಯ ತ್ರಿಮೂರ್ತಿ ಗರಡಿ
ಕಣಧೂಳ ದ್ಯುತಿ ಅಂಧಕಾರ ನಿವೃತ್ತಿ, ಶುಕ್ಲ ರಕ್ತ ಆಜ್ಞಾಚಕ್ರ ವಾಸಿ
ಮಿಶ್ರ ವಿರಮಿತ ಅನಾಹತ, ನಿರ್ವಾಣ ಕುರಿತು ಸಹಸ್ರಾರ ವಾಸಿ ||

೪೬. ಸಿಂಜಾನ-ಮಣಿ-ಮಂಜೀರ-ಮಂಡಿತ-ಸ್ರೀಪದಾಂಬುಜ

ದೇವಿ ಲಲಿತೆ ಪಾದ ಸೂಕ್ತೆ, ಅನರ್ಘ್ಯರತ್ನಾ ಕಾಲ್ಗೆಜ್ಜೆ ಸುಶೋಭಿತೆ
ಫಳಫಳ ಹೊಳೆವ ಕಾಂತಿಯಲೆ, ಭಕುತ ಜನ ಮಾನಸ ಪೂಜಿತೆ
ಪಾದಪದ್ಮಾಂಬುಜ ಸೂಕ್ಷ್ಮಾತಿಸೂಕ್ಷ್ಮವಿವರ, ನಿಲುಕ ಮನುಜಪ್ರಜ್ಞೆ
ಪ್ರೀತ್ಯರ್ಥ ವಾಗ್ದೇವಿ ವಿಮರ್ಶೆ, ಮಾಯಾ ಸ್ವರೂಪಿಣಿ ಮೆಚ್ಚಿಸೆ ಯಜ್ಞ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A8%E0%B3%A6-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AA%E0%B3%A7%E0%B2%B0%E0%B2%BF%E0%B2%82%E0%B2%A6-%E0%B3%AA%E0%B3%AC%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%A6-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/9-5-2013/40855

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 41-46 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/07/lalitha-sahasranamam-41-46.html

ನಿಮ್ಮ ಟಿಪ್ಪಣಿ ಬರೆಯಿರಿ