೦೦೪೩. ಭವಾನೀ (೧೧೨),ಭಾವನಾಗಮ್ಯ (೧೧೩), ಭವಾರಣ್ಯ-ಕುಠಾರಿಕಾ (೧೧೪) (ಶ್ರೀ ಲಲಿತಾ ಸಹಸ್ರನಾಮ ೧೧೨ ರಿಂದ ೧೧೪ನೇ ನಾಮಗಳ ವಿವರಣೆ)

೦೦೪೩. ಭವಾನೀ (೧೧೨),ಭಾವನಾಗಮ್ಯ (೧೧೩), ಭವಾರಣ್ಯ-ಕುಠಾರಿಕಾ (೧೧೪) (ಶ್ರೀ ಲಲಿತಾ ಸಹಸ್ರನಾಮ ೧೧೨ ರಿಂದ ೧೧೪ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೧೨- ೧೧೪
________________________________

೧೧೨.ಭವಾನೀ
‘ಭವ’ವೆ ಶಿವ ಮಹದೇವ ರೂಪ ‘ಅನ’ ತುಂಬೆ ಜೀವ
ಮಾತಾ ಅರ್ಧಾಂಗಿ ರೂಪೆ ಜೀವದಾಯಿ ಭವಾನಿ ಶಿವ
ಭಸ್ಮಾಂಗಜ ಪುನರ್ಜೀವ ಭವಾನಿ ಸಂಭೋಧಿತ ಭಾವ
ವಿಶ್ವೋತ್ಪತ್ತಿ ಸ್ಥಿತಿ ಭುಕ್ತಿ ಭವ ಸಂಗಾತಿ ಭಕ್ತಿ ಆವಿರ್ಭವ ||

ಐಕ್ಯತೆ / ಸಾಯುಜ್ಯ
ಐಕ್ಯತೆ ಸಾಯುಜ್ಯ ಗತಿ ದೈವ ಪ್ರಜ್ಞೆ ಮಾನಸಿಕ ಸ್ಥಿತಿ
ಚೈತನ್ಯ ಲೀನ ಪರಮ ಚೈತನ್ಯ ಸಾಯುಜ್ಯದ ಮುಕ್ತಿ
ಧಾವಿಸಿ ವರವೀವವಳೆ ಉಚ್ಚರಿಸೆ ‘ಅದು ನಾನಾಗಲಿ’
ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಐಕ್ಯ ಸಾಯುಜ್ಯದಲಿ ||

೧೧೩. ಭಾವನಾಗಮ್ಯ
ದೇವಿ ಸಾಕ್ಷಾತ್ಕಾರಕೆ ಮಾರ್ಗ ಮಾನಸಿಕ ಪೂಜೆ
ಅಂತರ್ಮಥನ ಅನಾವರಣ ನೆಪ ಬಾಹ್ಯ ಪೂಜೆ
ಧ್ಯಾನಾ ಮಂತ್ರ ಮುಖೇನ ಉತ್ತಮ ಮಂತ್ರಾರ್ಥ
ಅರಿ ದೇವಿಯ ಗುರು ಜತೆಗೆ ನಿಷ್ಕಳಂಕ ಪ್ರಜ್ಞಾರ್ಥ ||

೧೧೪. ಭವಾರಣ್ಯ-ಕುಠಾರಿಕಾ
ಸಂಸಾರದ ಅಡವಿ ನಿರಂತರ ಜನನಾ-ಮರಣ ಚಕ್ರ
ಐಹಿಕ ಬಂಧನ ಅರಿಷಡ್ವರ್ಗ, ಕಾನನ ವೃಕ್ಷಾ ಪಾತ್ರ
ನಿವಾರಿಸಲಡವಿ ಮೂಲೋತ್ಪಾಟನೆ ಮಮಕಾರದಾ
ವಿಕೃತಿಗೆಲ್ಲ ತರ್ಪಣ ದೇವಿ ಸಮರ್ಪಣ ಭಾವ ಸದಾ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%A9-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A7%E0%B3%A8-%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A7%E0%B3%AA%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/3-6-2013/41052

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 112-114 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalita-sahasranamam-112-114.html

ನಿಮ್ಮ ಟಿಪ್ಪಣಿ ಬರೆಯಿರಿ