೦೦೪೦. ಮೂಲಾಧಾರೈಕ-ನಿಲಯಾ (೯೯), ಬ್ರಹ್ಮಗ್ರಂಥಿ-ವಿಭೇದಿನೀ (೧೦೦), ಮಣಿಪೂರಾಂತ-ರುದಿತಾ (೧೦೧), ವಿಷ್ಣುಗ್ರಂಥಿ-ವಿಭೇದಿನೀ (೧೦೨), ಆಜ್ಞಾ-ಚಕ್ರಾಂತರಾಲಸ್ಥಾ (೧೦೩) (ಶ್ರೀ ಲಲಿತಾ ಸಹಸ್ರನಾಮ ೯೯ರಿಂದ ೧೦೩ನೇ ನಾಮಗಳ ವಿವರಣೆ)

೦೦೪೦. ಮೂಲಾಧಾರೈಕ-ನಿಲಯಾ (೯೯), ಬ್ರಹ್ಮಗ್ರಂಥಿ-ವಿಭೇದಿನೀ (೧೦೦), ಮಣಿಪೂರಾಂತ-ರುದಿತಾ (೧೦೧), ವಿಷ್ಣುಗ್ರಂಥಿ-ವಿಭೇದಿನೀ (೧೦೨), ಆಜ್ಞಾ-ಚಕ್ರಾಂತರಾಲಸ್ಥಾ (೧೦೩) (ಶ್ರೀ ಲಲಿತಾ ಸಹಸ್ರನಾಮ ೯೯ರಿಂದ ೧೦೩ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೯೯-೧೦೩
____________________________

೯೯. ಮೂಲಾಧಾರೈಕ-ನಿಲಯಾ
ಮೂಲಾಧಾರ ಚಕ್ರಕೆ ಹೆಸರೆ ಬುನಾದಿ ಚಕ್ರ
ಮೂಲವೆಂದರೆ ಬೇರು ಮೂಲ ಸೃಷ್ಟಿ ಸಚಿತ್ರ
ಜೀವವನೆತ್ತಿಡಿದೆ ಶಿರದಿಂದುಗುಷ್ಟಕೆ ಆಧಾರ
ದೇವಿ ಲಲಿತೆ ನಿವಾಸಿನಿ ಮೂಲಾಧಾರ ಚಕ್ರ ||

೧೦೦. ಬ್ರಹ್ಮಗ್ರಂಥಿ-ವಿಭೇದಿನೀ
ಕುಂಡಲಿನೀ ಪಥ ಮಾರ್ಗ ಮೂರು ತೊಡಕಂತೆ ಹುಡುಕೆ
ಗಂಟಿನ ರೂಪದಲಿಹ ಗ್ರಂಥಿಯನರಸಿ ಛೇಧಿಸೆ ತೊಡಕೆ
ತೆರೆದುಕೊಂಡಾ ಮಾರ್ಗ ಉನ್ನತ ಚಕ್ರಾರೋಹಣ ಯಾನ
ಬ್ರಹ್ಮಗ್ರಂಥಿ ವಿಭೇಧಿಸೆ ದೇವಿ ಸ್ವಾಧಿಷ್ಟಾನ ಚಕ್ರಕಾಗಮನ ||

೧೦೧. ಮಣಿಪೂರಾಂತ-ರುದಿತಾ
ಶೋಭಿತೆ ಸಾಲಂಕೃತೆ ದೇವಿ ನಾಭಿ ಚಕ್ರಾ ಮಣಿಪೂರಕ
ಸಿಂಹಾಸನಾರೂಢ ಆಸೀನೆ ನಾಭಿ ಚಕ್ರವಾಸಿ ನಿರಂತರ
ಕೋರೈಸೊ ಮಿಂಚೆ ಶಕ್ತಿಯಾಗಿ ತಮ ಬೆಳಗಿಸೊ ಕಾಂತಿ
ಕುಂಡಲಿನಿ ಪ್ರಭೆಗಿಂದ್ರಚಾಪ ವರ್ಷಧಾರೆ ನೀಲ್ಮೇಘ ಭಕ್ತಿ ||

೧೦೨. ವಿಷ್ಣುಗ್ರಂಥಿ-ವಿಭೇದಿನೀ
ಮಣಿಪೂರಕ ನಾಭಿ ಚಕ್ರ ನಿವಾಸಿತನೆ ಮಹಾವಿಷ್ಣು
ಹೊತ್ತು ವಿಷ್ಣುಗ್ರಂಥಿಯ ತಳದೆ ಜಗ ಸುಸ್ಥಿತಿ ಸಹಿಷ್ಣು
ಸ್ಥಿತಾತೀತ ಅವಸ್ಥಾತೀತ ಸಾಧಕ ದಾಟಿದರೀ ಗ್ರಂಥಿ
ಯೋಗಿ ಋಷಿ ಮುನಿ ಜೀವಿತ ಚಿರಕಾಲಾಮೃತಶಕ್ತಿ ||

೧೦೩. ಆಜ್ಞಾ-ಚಕ್ರಾಂತರಾಲಸ್ಥಾ
ತ್ರಯೋನೇತ್ರ ಹೆಸರಾಂತ ಆಜ್ಞಾಚಕ್ರ ನಿವಾಸಿನಿ ದೇವಿ
ಸ್ವಾಧೀನ ಗುರುಮುಖೇನ-ಆಜ್ಞಾ ತಿಲ ಬ್ರಹ್ಮಜ್ಞಾನ ಛವಿ
ಮನೋಚಕ್ರ ಜ್ಞಾನ ಸಂಪಾದನೆ ಸಾಧನಕೆ ಮನಸೆ ದಾರಿ
ಆಜ್ಞಾಚಕ್ರ ಮಾನಸಪೂಜೆ ಶಿವಶಕ್ತಿ ಸಮಷ್ಟಿ ಗುರು ತೋರಿ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%A6-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AF%E0%B3%AF%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A6%E0%B3%A9%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/1-6-2013/41033

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 99-103 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam.html

ನಿಮ್ಮ ಟಿಪ್ಪಣಿ ಬರೆಯಿರಿ