೦೦೨೨. ಶಿವಾ (೫೩), ಸ್ವಾಧೀನ ವಲ್ಲಭಾ (೫೪) (ಶ್ರೀ ಲಲಿತಾ ಸಹಸ್ರನಾಮ ೫೩ ಮತ್ತು ೫೪ನೇ ನಾಮಗಳ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಶಿವಾ (೫೩), ಸ್ವಾಧೀನ ವಲ್ಲಭಾ (೫೪)

೨೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೫೩ ಮತ್ತು ೫೪
____________________________________

೫೩. ಶಿವಾ
ಶಿವಶಕ್ತಿ ಏಕ ಅಂತರಾರಹಿತ, ದೇವಿ ಶಿವಾ ನಾಮಾಂಕಿತ
ಶಿವನೆನೆ ಮಂಗಳ, ದೇವಿ ಅವನಿಚ್ಚಾರೂಪ ಮೂರ್ತಾನ್ವಿತ
ನಿರ್ಮೋಹಿ ಶಿವ ಪರಬ್ರಹ್ಮ ಇಚ್ಚಾಶಕ್ತಿ ಪ್ರತಿಬಿಂಬೆ ಲಲಿತೆ
ಯಥಾಶಿವಾ ತಥಾದೇವಿ ಆತ್ಮಸಾಕ್ಷಾತ್ಕಾರಾರ್ಥಾ ಏಕತೆ ||

Addition
ಜಗನ್ಮಾತಾಪಿತ ಉಮಾಶಂಕರ ಪಾರ್ವತಿ-ಪರಮೇಶ್ವರ
ಶಂಕರಿ-ಶಿವ ಸಂಗಾತಿ ಶಿವ-ಶಕ್ತಿ ಶಿವ-ಶಂಕರಿ ನಿರಂತರ
ದೇವೀ ಪ್ರಜ್ಞಾ ಮಾಯಾಶಕ್ತಿ, ಜ್ಞಾನಿನಿ ಸ್ವಯಂಪ್ರಕಾಶಿತೆ
ನಿರ್ಗುಣೆ ಬಂಧ ವಿನಾಶೆ, ಪರಮಾನಂದರೂಪಿಣಿ ಲಲಿತೆ ||

೫೪. ಸ್ವಾಧೀನ ವಲ್ಲಭಾ
ಶಿವವೆ ಅಚಲ ಸೃಷ್ಟಿಕಾಯಕ, ಸೃಷ್ಟಿಸೇ ಸಹಾಯಕೆ ಶಕ್ತಿ
ಶಿವ ಸ್ಥಿರತೆ ಸಮರ್ಥ, ಸಂಯೋಗಕೆ ಚಲನ ಕ್ರಿಯಾ ಶಕ್ತಿ
ಇಹ ಪ್ರಪಂಚ ಕಾರಣಕರ್ತ ಶಿವ, ಶಕ್ತಿಯಾಗಿ ದೇವಿ ವೃತ್ತಿ
ಜತೆಯಾಗದೆ ಶಿವಾಶಿವ ಶಕ್ತಿತ್ರಯ ಸೃಷ್ಟಿಗೆ ಲಯದ ಗತಿ ||

ಸರ್ವಾಂತರ್ಯಾಮಿ ಬ್ರಹ್ಮ, ಜೀವಿ ಕರ್ಮ ಸಂಗ್ರಹೆ ಆತ್ಮ
ಜೀವಸೃಷ್ಟಿ ಅಸಂಭವ ಸ್ಥೂಲರೂಪಾಗತ್ಯ ನಿರ್ವಾಹಶ್ರಮ
ಕಾತುರಾತ್ಮಾ ಬ್ರಹ್ಮಸೃಷ್ಟಿ ಜೀವಜನ್ಮ ವಿನಾಃ ಆತ್ಮ ನಿಶ್ಚಲ
ಶಿವ ಶಕ್ತಿ ಸಮ್ಮಿಲನ ಯುಕ್ತ, ಸಂಯುಕ್ತದೆ ಬ್ರಹ್ಮಾಂಡ ಬಲ ||

On ಸೂಕ್ಷ್ಮರೂಪಾ ವರ್ಣನೆ
———————————-
ಶ್ರೀ ನಗರ ನಿವಾಸಿನಿ ಲಲಿತೆ ಸೂಕ್ಷ್ಮರೂಪಾ ವಾಗ್ದೇವಿ ವರ್ಣಿತೆ
ಸಹಜ ಸಂಶಯ ಉಚಿತಾನುಚಿತ ಖಾಸಗೀ ಯುಕ್ತಾ ಯುಕ್ತತೆ
ಸಂಕೇತದಲೇನಡಗಿದ್ದೀತೊ ಮುಸುಕುಟ್ಟ ವರ್ಣನೆ ಸೌಂದರ್ಯ
ಬ್ರಹ್ಮಾಂಡ ಮೂಲರಹಸ್ಯ ಪರೀಕ್ಷ ಬಲ್ಲವರಾರು ನಿಜಾಂತರ್ಯ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A8%E0%B3%A8-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AB%E0%B3%A9-%E0%B2%AE%E0%B2%A4%E0%B3%8D%E0%B2%A4%E0%B3%81-%E0%B3%AB%E0%B3%AA%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/12-5-2013/40872

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 53-54 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/07/lalitha-sahasranamam-5354.html%C2%A0

ನಿಮ್ಮ ಟಿಪ್ಪಣಿ ಬರೆಯಿರಿ