೦೦೪೬. ಭಯಾಪಹಾ (೧೨೧), ಶಾಂಭವೀ (೧೨೨), ಶಾರದಾರಾಧ್ಯಾ (೧೨೩) (ಶ್ರೀ ಲಲಿತಾ ಸಹಸ್ರನಾಮ ೧೨೧ ರಿಂದ ೧೨೩ನೇ ನಾಮಗಳ ವಿವರಣೆ)

೦೦೪೬. ಭಯಾಪಹಾ (೧೨೧), ಶಾಂಭವೀ (೧೨೨), ಶಾರದಾರಾಧ್ಯಾ (೧೨೩) (ಶ್ರೀ ಲಲಿತಾ ಸಹಸ್ರನಾಮ ೧೨೧ ರಿಂದ ೧೨೩ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೨೧-೧೨೩
______________________________

೧೨೧. ಭಯಾಪಹಾ
ಬ್ರಹ್ಮವರಿತವ ನಿರ್ಭೀತ ಸ್ವಯಂ ಸಾಕ್ಷೀಭೂತ
ಮಾಯೆ ಅಜ್ಞಾನವಷ್ಟೆ, ಎರಡಾಗಿ ಹೆದರಿಸುತ
ಸಂಸಾರಚಕ್ರ ಬಂಧನ, ಭಯ ಬಿಡಿಸೊ ಚರಣ
ನಾಮೋಚ್ಛಾರಣೆಯೆ ಬಲ, ಭೀತಿಯೆ ನಿತ್ರಾಣ ||

ಭಯದ ಬಗ್ಗೆ ಇನ್ನಷ್ಟು ವಿವರಣೆ:

ಭೀತ ಮನವೆ ಶಕ್ತಿಗೆ ಬವಣೆ, ಕನ್ನಡಿ ಸುಖದುಃಖ ಪ್ರತಿಫಲನೆ
ಕರ್ಮಾರ್ಜಿತ ಪೂರ್ವಾರ್ಜಿತಾ, ಕೊರಗೆ ಋಣಾತ್ಮಕ ಯಾತನೆ
ಆಧ್ಯಾತ್ಮಿಕತೆ ಔನ್ನತ್ಯ ವಿನಾಶ, ಅರ್ಥಿಕ ಭೌತಿಕ ಅಹಂ ಜಾಲ
ಧನಾತ್ಮಕ ಪೋಷಣೆ ತಾನೆ, ಮೂಲೋತ್ಪಾಟನೆ ಭಯ ಮೂಲ ||

ಬಿತ್ತಿದ ಬೀಜದ ಫಸಲು, ಭಯ ಭೀತಿಯ ಹೊಸಿಲು
ದೈವಿ ಶಕ್ತಿಯೆ ಸುತ್ತಲೂ, ನಂಬೆ ರಕ್ಷಿಸಿ ಹಗಲಿರುಳು
ಭಯಕೆ ಅಂಜದೆ ಕಪಿಮುಷ್ಟಿಯಲ್ಹಿಡಿದಿಡುತೆ ಕಾರಣ
ಕ್ಷಿಪ್ರ ಧ್ಯಾನ ಕಾರಣ ಭಸ್ಮ, ಭಯಪ್ರಭಾವ ನಿರ್ನಾಮ ||

೧೨೨. ಶಾಂಭವೀ
ಭಕ್ತಗೆ ಸುಖ ದಯಪಾಲಿಸುತ ಶಿವ ಶಂಭು ಲಲಿತೆ ಶಾಂಭವಿ
ಆಜ್ಞಾಚಕ್ರ ಕಣ್ಗುಡ್ಡೆ ಗಮನ ಶಾಂಭವಿ ಮುದ್ರೆ ಪ್ರಜ್ಞಾರೋಹಣ
ತ್ರಿದೀಕ್ಷಾ ವ್ಯಾಖ್ಯಾನ ಶಾಕ್ತಿ, ಮಾಂತ್ರಿ, ಶಾಂಭವಿ ಅರಾಧನೆಗೆ
ಶಾಂಭವ ಮಾತೆ ಶಾಂಭವಿ ತನುಮನವೆಲ್ಲಾ ಸದಾಶಿವವಾಗೆ ||

೧೨೩. ಶಾರದಾರಾಧ್ಯಾ
ಅರಾಧಿತೆ ಮಾತೆ ವೇದ ಶಾಸ್ತ್ರ ಪಾರಂಗತ ಜ್ಞಾನವಂತ
ವಾಗ್ಡೇವಿ ರೂಪದ ಶಾರದೆ ಸರಿ ಮಾತನು ಕರುಣಿಸುತ
ಆರಾಧಿಸುವಳೆ ಸರಸ್ವತಿ ವಾಕ್- ದೇವಿ ಸಹಸ್ರನಾಮ
ಶಾರದಾ ನವರಾತ್ರಿ ಪೂಜೆಗೆ ಲಲಿತಾಂಬಿಕೆ ಸಂಭ್ರಮ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%AC-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A8%E0%B3%A7-%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A8%E0%B3%A9%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/19-6-2013/41198

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 121-123 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-121-123.html

ನಿಮ್ಮ ಟಿಪ್ಪಣಿ ಬರೆಯಿರಿ