೦೦೨೩. ಸುಮೇರು-ಮಧ್ಯ-ಶೃಂಗಸ್ಥಾ (೫೫), ಶ್ರೀಮನ್-ನಗರ-ನಾಯಿಕಾ (೫೬), ಚಿಂತಾಮಣಿ-ಗೃಹಾಂತಸ್ಥಾ (೫೭), ಪಂಚ-ಬ್ರಹ್ಮಾಸನ-ಸ್ಥಿತಾ (೫೮) (ಶ್ರೀ ಲಲಿತಾ ಸಹಸ್ರನಾಮ ೫೫ರಿಂದ ೫೮ನೇ ನಾಮಗಳ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಸುಮೇರು-ಮಧ್ಯ-ಶೃಂಗಸ್ಥಾ (೫೫), ಶ್ರೀಮನ್-ನಗರ-ನಾಯಿಕಾ (೫೬), ಚಿಂತಾಮಣಿ-ಗೃಹಾಂತಸ್ಥಾ (೫೭), ಪಂಚ-ಬ್ರಹ್ಮಾಸನ-ಸ್ಥಿತಾ (೫೮)

೨೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೫೫ರಿಂದ ೫೮
___________________________________

೫೫. ಸುಮೇರು-ಮಧ್ಯ-ಶೃಂಗಸ್ಥಾ
ಸುಮೇರು ಪರ್ವತ ತ್ರಿಕೂಟ ತ್ರಿಕೋಣಾ ಮಧ್ಯ ಉನ್ನತ ದಿಟ
ಬಂಗಾರ ಸದೃಶ್ಯ ಕಿರಣ ಶಿಖರೋನ್ನತ ಅಂತಃಪುರ ಮುಕುಟ
ತ್ರಿಕೂಟ ತ್ರಿಮೂರ್ತಿ ನಿವಾಸಾವರಣ ದೇವೀ ನಿಲಯ ಸನಿಹ
ನಡು ಶಿಖರಾಂತಃಪುರ ನಿವಸಿತೆ ಶ್ರೀ ಚಕ್ರೆ ಲಲಿತಾಂಬೆ ಮಹ ||

೫೬. ಶ್ರೀಮನ್-ನಗರ-ನಾಯಿಕಾ
ದೇವ ಶಿಲ್ಪಿ ನಿರ್ಮಿತ ಸಮೃದ್ದ ಪಾಲ್ಗಡಲ ನಡುವೆ ಶ್ರೀನಗರ
ರತ್ನ ದ್ವೀಪಾಂಕಿತ ವಿಶ್ವಕರ್ಮ ಚಾತುರ್ಯಪೂರ್ಣ ಮಣಿಹಾರ
ಶ್ರೀನಗರ ಮಧ್ಯಾ ಶ್ರೀವಿದ್ಯಾ ಪಟ್ಟಣದೆ, ಇಪ್ಪತ್ತೈದು ತತ್ವ ಭಿತ್ತಿ
ಸೃಷ್ಟಿ ಸ್ಥಿತಿ ಲಯ ಕ್ರಿಯಾ ನಿರತೆ ಲಲಿತೆ ರಾಣಿಯಾ ಪ್ರವೃತ್ತಿ ||

೫೭. ಚಿಂತಾಮಣಿ-ಗೃಹಾಂತಸ್ಥಾ
ಶ್ರೀ ನಗರದ ಉತ್ತರದಲಿದೆ ದೇವಿಯ ವಾಸ ನಿಲಯ
ಅನರ್ಘ್ಯ ರತ್ನಾಲಂಕೃತ ಭಿತ್ತಿಯ ಮಹಲಿನ ಮಾಯ
ಕೇಳೆಲ್ಲ ಕೊಟ್ಟು ಚಿಂತಾಮಣಿ ಮನರುಜ ಪರಿಹಾರಿಣಿ
ಸಕಲ ಮಂತ್ರೋಗಮಸ್ಥಾನ ದೇವಾನುದೇವ ಪೂಜಿಣಿ ||

೫೮. ಪಂಚ-ಬ್ರಹ್ಮಾಸನ-ಸ್ಥಿತಾ
ಪಂಚಮಹಾಭೂತ ಸೃಷ್ಟಿ ಮೂಲಧಾತು ದೇವಿ ಸೃಷ್ಟಿಕಾರಿಣಿ
ಮೂಲಾಧಾರ ಭೂಮಿ ಸ್ವಾದಿಷ್ಟಾನ ಜಲ ಮಣಿ-ಪೂರಕ ಅಗ್ನಿ
ಅನಾಹತ ವಾಯು ವಿಶುದ್ಧ ಆಕಾಶ ಪ್ರತಿನಿಧಿಸಿ ದೇಹ ಚಕ್ರ
ಬ್ರಹ್ಮಾಸನದಿಂ ಆಜ್ಞಾ ಸಹಸ್ರಾರ ಶಿವಶಕ್ತಿ ಸಂಯೋಗ ಸಾರ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A8%E0%B3%A9-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AB%E0%B3%AB%E0%B2%B0%E0%B2%BF%E0%B2%82%E0%B2%A6-%E0%B3%AB%E0%B3%AE%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/14-5-2013/40884

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 55-58 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/07/lalitha-sahasranamam-55-58.html

ನಿಮ್ಮ ಟಿಪ್ಪಣಿ ಬರೆಯಿರಿ