೦೦೪೨.ಷಟ್ಚಕ್ರೋಪರಿ-ಸಂಸ್ಥಿತಾ (೧೦೮), ಮಹಾಸಕ್ತಿಃ (೧೦೯), ಕುಂಡಲಿನೀ (೧೧೦), ಬಿಸತಂತು-ತನೀಯಸೀ (೧೧೧) (ಶ್ರೀ ಲಲಿತಾ ಸಹಸ್ರನಾಮ ೧೦೮ ರಿಂದ ೧೧೧ನೇ ನಾಮಗಳ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

೪೨. ಶ್ರೀ ಲಲಿತಾ ಸಹಸ್ರನಾಮ

ಲಲಿತಾ ಸಹಸ್ರನಾಮ ೧೦೮ – ೧೧೧
_______________________________

೧೦೮. ಷಟ್ಚಕ್ರೋಪರಿ-ಸಂಸ್ಥಿತಾ
ಐಹಿಕ ಪ್ರಾಪಂಚಿಕ ಭೌತಿಕಾತೀತ ಸಹಸ್ರಾರ ಪ್ರಕ್ರಿಯ
ಶಿವೈಕ್ಯ ದೇವಿ ತಾ ಪರಬ್ರಹ್ಮ ಷಟ್ಚಕ್ರೋನ್ನತ ಉಪಸ್ಥಿತ
ಅರಿಯೆ ಪರಬ್ರಹ್ಮವ ದಾಟುತೆ ಷಟ್ಚಕ್ರ ಬಂಧ ವಿಸ್ತಾರ
ಮೂಲಾಧಾರದಿಂದಾಜ್ಞಾ ಚಕ್ರಾತೀತ ಪರಬ್ರಹ್ಮ ದ್ವಾರ ||

೧೦೯. ಮಹಾಸಕ್ತಿಃ
ಶಿವ ಸಮಾಗಮೋತ್ಸವಾಸಕ್ತೇ ದೇವಿ ಆಂತರೀಕಾ ಮಾನಸ
ಪೂಜಾ ಸೂಕ್ಶ್ಮಾತಿಸೂಕ್ಷ್ಮರೂಪ ಕುಂಡಲಿನಿ ಸ್ವರೂಪ ಮನಸಾ
ಮೂಲಾಧಾರಸ್ಥ ವಸುಂಧರೆ ಸರ್ವಾಧಿಪತ್ಯ ಪರಮೊನ್ನತ ಶಕ್ತಿ
ಪ್ರಸರಿತವೆಲ್ಲೆಡೆ ನಿಭಿಡ ದೇವಿ ಸರ್ವಶಕ್ತಿ ಸಂಪನ್ನೆ ಸ್ತುತಿ ಭಕ್ತಿ ||

೧೧೦. ಕುಂಡಲಿನೀ
ತ್ರಯಾರ್ಧಾವೃತ್ತಾ ನಾಗಿಣಿ ಉಪಸ್ಥಿತೆ ಮೂಲಾಧಾರೆ
ಸೂಕ್ಷಾತಿಸೂಕ್ಷ್ಮರೂಪೆ ಮಾನಸ ಪೂಜಾ ಪ್ರಸನ್ನಿತವಿರೆ
ಮುಖ್ಯ ಪ್ರಾಣಶಕ್ತಿ ಕುಂಡಲಿನಿ ಮೂಲಾಧಾರಾಗ್ನಿ ಮಧ್ಯ
ಸೌಖ್ಯಾಸೌಖ್ಯ ಕಾರಣ ವೈಪರಿತಾಗ್ನಿ ಕರ್ಣರಂಧ್ರೆ ಶ್ರಾವ್ಯ ||

೧೧೧. ಬಿಸತಂತು-ತನೀಯಸೀ
ಸೂಕ್ಷ್ಮಾತಿಸೂಕ್ಷ್ಮ ಅಂತಿಮ ನಾಮ ಬಾಲ ರೂಪಿಣಿ ಸುಕಮಲೆ
ಅಗೋಚರಾ ಸೂಕ್ಷ್ಮನಾಡಿ ಕುಂಡಲಿನೀ ಪ್ರವಾಹೆ ಪ್ರಜ್ವಲ ಸೆಲೆ
ಸುಪ್ತ ಶಕ್ತಿ ವಿತರಣಾ ಪಯಣೆ ಶುದ್ಧ ಸಾಧಕ ಸಿದ್ದಿ ಪ್ರಸಾಧಿತ
ಅಪಾತ್ರಾ ಬ್ರಹ್ಮಸಾಕ್ಷಾತ್ಕಾರ ಶಿಕ್ಷಿತ ದೇವಿ ಶಿವೇಚ್ಛೆ ಅಭಾದಿತ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%A8-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A6%E0%B3%AE-%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A7%E0%B3%A7%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/2-6-2013/41043

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 108-111 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-108-111.html

ನಿಮ್ಮ ಟಿಪ್ಪಣಿ ಬರೆಯಿರಿ