೦೦೨೫. ಮಹಾಪದ್ಮಾಟವೀ-ಸಂಸ್ಥಾ (೫೯), ಕದಂಬವನ-ವಾಸಿನೀ (೬೦), ಸುಧಾ-ಸಾಗರ-ಮಧ್ಯಸ್ಥಾ (೬೧), ಕಾಮಾಕ್ಷಿ (೬೨), ಕಾಮದಾಯಿನೀ (೬೩) (ಶ್ರೀ ಲಲಿತಾ ಸಹಸ್ರನಾಮ ೫೯ರಿಂದ ೬೩ನೇ ನಾಮಗಳ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಮಹಾಪದ್ಮಾಟವೀ-ಸಂಸ್ಥಾ (೫೯), ಕದಂಬವನ-ವಾಸಿನೀ (೬೦), ಸುಧಾ-ಸಾಗರ-ಮಧ್ಯಸ್ಥಾ (೬೧), ಕಾಮಾಕ್ಷಿ (೬೨), ಕಾಮದಾಯಿನೀ (೬೩)

೨೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೫೯ರಿಂದ ೬೩
_____________________________________

೫೯. ಮಹಾಪದ್ಮಾಟವೀ-ಸಂಸ್ಥಾ
ಕಿರೀಟ ಚಕ್ರ ಸಹಸ್ರಾರ ಮಧ್ಯೆ ಸೂಕ್ಷ್ಮ ಬ್ರಹ್ಮರಂಧ್ರಾ ಪದ್ಮಾಟವಿ
ಸಹಸ್ರದಳ ಗಜಪದ್ಮ ನಿವಾಸಿ ಶಿವ ಶಕ್ತಿ ವಿಲೀನ ಷಡ್ಚಕ್ರ ತಡವಿ
ದೈವಿಕ ದ್ರವ್ಯ ನಿರ್ಗಮಾಗಮನ ಭೌತಿಕ ತನುವೀ ಶಿರೋ ಚಕ್ರದೆ
ಸಾಧಕ ಜಲೋದ್ದೇಪಿಸೆ ಸದಳ ಲೌಕಿಕ ಬ್ರಹ್ಮಾಂಡಕೆ ಚಿಮ್ಮಿಸದೆ ||

೬೦. ಕದಂಬವನ-ವಾಸಿನೀ
ಚಿಂತಾಮಣಿ ಗೃಹಾವೃತ್ತ ಸಪ್ತಮಾಷ್ಟಮ ಬೆಳ್ಳಿ ಬಂಗಾರದ ಭಿತ್ತಿಯ ಮಧ್ಯೆ
ದಿವ್ಯ ಸುಗಂಧಮಯ ಕದಂಬವನ, ಪೃಥ್ವಿ ಪ್ರಕೃತಿ ತತ್ವಾರಾಧನೆಯ ವಿದ್ಯೆ
ಸಂಧಿಸಿ ಶ್ರೀಚಕ್ರದೆಲ್ಲಾ ದೇವಿಯರಿಲ್ಲೆ, ಋತು ದೇವತೆ ಸತಿ ಸಮೇತ ಸಕಲೆ
ನೆಲೆ ಮೂರರಿಂದೆಂಟು ಭಿತ್ತಿ ನಡುವರಮನೆ, ಶ್ಯಾಮಲ ಮಂತ್ರಿಣಿ ಅಷ್ಟದಲೆ ||

Addition
ಶ್ಯಾಮಲಾದೇವಿ ಬ್ರಹ್ಮವಿದ್ಯೆಗೊಡತಿ ನವದಶ ಬೀಜಾಕ್ಷರ ಮಂತ್ರಿಣೀ ದೇವಿ
ವಾಗ್ದೇವಿ ಸ್ತುತಿ ಅನಾವರಣಕಿಡೆ ಅಮೂಲಾಗ್ರ ನಿಯಂತ್ರಣಾ ಲಲಿತಾ ಛವಿ
ಪ್ರತಿ ನಾಮಾಂತರ್ಗತ ಹಿನ್ನಲೆ ರಹಸ್ಯಾರ್ಥ ಜತೆ ಬೀಜಾಕ್ಷರ ನಿಗೂಢಾ ತರ
ಗೂಢಾರ್ಥನಾವರಣ ಸೂತ್ರ ದಕ್ಕದೆ ಅಪಾತ್ರ, ದಕ್ಕಿರೆ ಅಪರೂಪದ ಪಾತ್ರ ||

೬೧. ಸುಧಾ-ಸಾಗರ-ಮಧ್ಯಸ್ಥಾ
ಸಹಸ್ರಾರದೆ ಸುಧಾ ಸಾಗರದ ನಡುವೆ ದೇವಿಯಾ ವಸತಿ
ತಲುಪೊ ಹಾದಿ ಸಹಸ್ರಾರಕೆ ಮೊದಲೆ ಸೋಮಚಕ್ರ ಸ್ವಸ್ಥಿ
ಕುಂಡಲಿನಿ ಸೋಮಚಕ್ರ ಸಂಪರ್ಕ ಉಷ್ಣೋದಕ ಕಂಠ ಸುಧ
ಅಮೃತವರ್ಷಿಣಿ ಮಳೆ ಮಕರಂದ ಪ್ರತಿನಾಡಿಗಾಯುರ್ವರ್ಧ ||

೬೨. ಕಾಮಾಕ್ಷಿ
ಕೃಪಾಕರಿ ಕರುಣಾಕರಿ ದಯಾಕರಿ ಮನೋಹರ ನಯನೆ
‘ಕಾ’ ಸರಸ್ವತಿ ‘ಮಾ’ ಲಕ್ಷ್ಮಿ ಶ್ರೀ ದೇವಿ ನಯನದ್ವಯವೆನೆ
‘ಕಾಮ’ನೆನೆ ಶಿವನ ಕಣ್ಣೆ ಲಲಿತೆ ಆಲೋಚನೆ ಪ್ರತಿಫಲಿತೆ
ಭಕ್ತ ಸಕಲ ಇಚ್ಚಾಪೂರ್ಣ ಬರಿ ಕಾಮಾಕ್ಷಿ ನೋಟದ ಮಾತೆ ||

೬೩. ಕಾಮದಾಯಿನೀ
ಶಿವ ಪರಮ ಪ್ರಕಾಶ ನಿರ್ಗುಣ ಬ್ರಹ್ಮ ಸಾಮೀಪ್ಯ ಪ್ರಸಾದಿನಿ
‘ಕಾಮಾಕ್ಷಿ’ ‘ಕಾಮೇಶ್ವರೀ’ ಬ್ರಹ್ಮ ಬಿರುದಾಂಕಿತೆ ಸರ್ವಶಕ್ತಿನಿ
ದೇವಿ ಶಿವಾವಕುಂಠನ ಕರುಣಿಸದೆ ಆಗದ ತೆರೆ ಸಾಕ್ಷಾತ್ಕಾರ
ಆತ್ಮಸ್ವರೂಪಿಣಿ ವ್ಯಕ್ತೆ ಧ್ಯಾನಾತ್ಮ ಮಹಾತ್ರಿಪುರಸುಂದರೀಶ್ವರ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A8%E0%B3%AB-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AB%E0%B3%AF%E0%B2%B0%E0%B2%BF%E0%B2%82%E0%B2%A6-%E0%B3%AC%E0%B3%A9%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/16-5-2013/40898

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 59-63 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/07/lalitha-sahasranamam.html

ನಿಮ್ಮ ಟಿಪ್ಪಣಿ ಬರೆಯಿರಿ