೦೦೨೮.ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾ (೬೮), ಗೇಯಚಕ್ರ-ರಥಾರೂಢ-ಮಂತ್ರಿಣೀ-ಪರಿಸೇವಿತಾ (೬೯) (ಶ್ರೀ ಲಲಿತಾ ಸಹಸ್ರನಾಮ ೬೮ ಮತ್ತು ೬೯ನೇ ನಾಮಗಳ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾ (೬೮), ಗೇಯಚಕ್ರ-ರಥಾರೂಢ-ಮಂತ್ರಿಣೀ-ಪರಿಸೇವಿತಾ (೬೯)

೨೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೬೮, ೬೯
______________________________________

೬೮. ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾ
ಲಲಿತಾಂಬಿಕೆ ಚಕ್ರರಾಜ ರಥ ಪ್ರಥಮ, ಪರಬ್ರಹ್ಮ ಜ್ಞಾನಾಯುಧ
ಆವಾಸ ಸ್ಥಾನ ಶ್ರೀ ಚಕ್ರ, ಆಯುಧಾಲಂಕಾರ ನವಾಂತಸ್ತು ಸನ್ನದ್ಧ
ಶ್ರಿ ಚಕ್ರದಲಿಹೆ ನವ ತ್ರಿಕೋಣ, ಸಂಧಿತಾ ಪಂಚಶಕ್ತಿ ಚತುರ್ಥಶಿವ
ದೇವದೇವಿ ಯೋಗಿನಿ ಸಹಿತ ಲಲಿತಾ ನಿವಾಸ ಪೂಜಾರ್ಹ ಸರ್ವ ||

Addition
ವಾಗ್ದೇವಿ ಜ್ಞಾನ ಚಾತುರ್ಯ ಘನ, ಪ್ರಚರಿಸೆ ಆತ್ಮಸಾಕ್ಷಾತ್ಕಾರ ಸೂಕ್ಷ್ಮ
ಮೂಲಾಧಾರಾಜ್ಞಾಚಕ್ರ ಬುನಾದಿ, ಆಯುಧ ಜ್ಞಾನ ಮನನಿಯಂತ್ರಣ
ಪ್ರತಿನಿಧಿ ಪಂಚಚಕ್ರ ಕರ್ಮೇಂದ್ರಿಯ, ಆಜ್ಞಾಚಕ್ರದೆ ಮನ ನಿಯಂತ್ರಣ
ನಿಯಂತ್ರಣ ಷಡ್ಚಕ್ರ ಸಿದ್ದಿ, ಶಿವ ತಾದ್ಯಾತ್ಮ ನಿರಂತರ ಬ್ರಹ್ಮಜ್ಞಾನ ಸಮ ||

೬೯. ಗೇಯಚಕ್ರ-ರಥಾರೂಢ-ಮಂತ್ರಿಣೀ-ಪರಿಸೇವಿತಾ
ಚಕ್ರರಾಜ ಸಾಂಗತ್ಯ ರಥಾ ಪ್ರಥಮ, ಮಂತ್ರಿಣಿ ಶ್ಯಾಮಲಾದೇವಿ
ಗೇಯಚಕ್ರದೊಡತಿ ಲಲಿತಾರಾಧಿತೆ, ಸಲಹಾ ವರ್ಗ ಪೂಜೆ ಸವಿ
ಯೋಗಿನಿಗಳುಪಾಸನ ಪ್ರವೀಣೆ, ಶ್ರೀವಿದ್ಯಾ ವಿಧಾನ ನುರಿತವರೆ
ಗೇಯ ಶ್ರೀ ಚಕ್ರ ಮಹತ್ವ, ಪಂಚದಶಿ ಷೋಡಷಿ ಸಿದ್ದಿ ದೇವಿಯರೆ ||

Addition
ಶ್ರೀ ಚಕ್ರ ಸಮವೆ ನವಾಂಗಕೆ, ಬ್ರಹ್ಮರಂಧ್ರ ಶಿರ ಸಹಸ್ರಾರ
ನೊಸಲಾಜ್ಞಾಚಕ್ರ ಕೊರಳ್ವಿಶುದ್ಧಿ ಹೃದಯನಾಹತ ಭೂಶಿರ
ಮಣಿಪೂರಕನಾಭಿ ಸ್ವಾಧಿಷ್ಟಾನ ಮೂಲಾಧಾರ ಕಟಿ ತೊಡೆ
ಪಾದದೆ ಭೂಗತ ದಿವ್ಯ ಶಕ್ತಿ ಪಥ ದೇಹವೆ ಶ್ರೀಚಕ್ರಕೆ ಗೂಡೆ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A8%E0%B3%AE-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AC%E0%B3%AE-%E0%B2%AE%E0%B2%A4%E0%B3%8D%E0%B2%A4%E0%B3%81-%E0%B3%AC%E0%B3%AF%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/19-5-2013/40924

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 68-69 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-6869.html

ನಿಮ್ಮ ಟಿಪ್ಪಣಿ ಬರೆಯಿರಿ