೦೦೪೧. ರುದ್ರಗ್ರಂಥಿ-ವಿಭೇದಿನೀ (೧೦೪), ಸಹಸ್ರಾರಾಂಬುಜಾಜಾರೂಢಾ (೧೦೫), ಸುಧಾಸಾರಾಭಿ-ವರ್ಷಿಣೀ (೧೦೬), ತಡಿಲ್ಲತಾ-ಸಮರುಚಿಃ (೧೦೭) (ಶ್ರೀ ಲಲಿತಾ ಸಹಸ್ರನಾಮ ೧೦೪ರಿಂದ ೧೦೭ನೇ ನಾಮಗಳ ವಿವರಣೆ)

೦೦೪೧. ರುದ್ರಗ್ರಂಥಿ-ವಿಭೇದಿನೀ (೧೦೪), ಸಹಸ್ರಾರಾಂಬುಜಾಜಾರೂಢಾ (೧೦೫), ಸುಧಾಸಾರಾಭಿ-ವರ್ಷಿಣೀ (೧೦೬), ತಡಿಲ್ಲತಾ-ಸಮರುಚಿಃ (೧೦೭) (ಶ್ರೀ ಲಲಿತಾ ಸಹಸ್ರನಾಮ ೧೦೪ರಿಂದ ೧೦೭ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೦೪ – ೧೦೭
__________________________________

೧೦೪. ರುದ್ರಗ್ರಂಥಿ-ವಿಭೇದಿನೀ
ರುದ್ರಗ್ರಂಥಿ ಛೇಧನ ದೇವಿ ಸಹಸ್ರಾರಾಭಿಮುಖ ಪಯಣ
ದಾಟುತೆಲ್ಲಾ ನಡುವಣ ಆಜ್ಞಾಚಕ್ರದಿಂ ಸಹಸ್ರಾರ ಕ್ರಮಣ
ಪಂಚದಶಿ ಪ್ರತಿನಿಧಿಸೆ ಷಡ್ಚಕ್ರ ಜತೆ ತ್ರಿಗ್ರಂಥಿ ಸೂಕ್ಷ್ಮ ರೂಪ
ನಿರ್ನಾಮ ನಿರ್ಬಂಧ ದಾಟೆ ರುದ್ರ ಪರಮ ಜ್ಞಾನ ತದ್ರೂಪ ||

೧೦೫. ಸಹಸ್ರಾರಾಂಬುಜಾಜಾರೂಢಾ
ರುದ್ರ ಸುಪ್ರೀತೇ ದೇವಿ ಸಹಸ್ರಾರಾಗಮನ ಶಿವ ನಿರೀಕ್ಷಣ
ಶಿವ ಶಕ್ತಿ ಸಮಾಗಮ ಸಾಧಕ ಜೊತೆಯಾಗಿಸಿ ಅರಾಧನ
ಪಂಚಭೂತ ಕರ್ಮೇಂದ್ರ ಜ್ಞಾನೇಂದ್ರ ತನ್ಮಾತ್ರೆಗೆ ದ್ವಾದಶ
ಸಹಸ್ರಾರಕಮಲ ಮನದಳ ಸಂಸ್ಕೃತಾಕ್ಷರದ ಪಂಚದಶ ||

೧೦೬. ಸುಧಾಸಾರಾಭಿ-ವರ್ಷಿಣೀ
ಕುಂಡಲಿನಿ ಸಮಾಗಮ ಸಹಸ್ರಾರ ಶಾಖೋತ್ಪನ್ನ ಸಮ್ಮಿಲನ
ಸಹಸ್ರಾರ ನಡು ಸೋಮಚಕ್ರ ಸ್ರವಿಸೆ ನರನಾಡಿ ಸಂಪೂರ್ಣ
ದೇವಿ ಪಾದಾಮೃತ ಪ್ರವಾಹ ದ್ರವಿತ ತನು ಪೂರ್ಣತೆ ಜಳಕ
ಚಂದ್ರ ಚಿತ್-ಚಂದ್ರ-ಮಂಡಲ ದೇವಿ ಪಾದಮೃತ ನಿರಾತಂಕ ||

೧೦೭. ತಡಿಲ್ಲತಾ-ಸಮರುಚಿಃ
ಶಿವ-ಶಕ್ತಿ ಸಂಯೋಗ ಸ್ಥಿರ ದೇವಿ ವಿದ್ಯುಲ್ಲೋಖಾ ನಿರಂತರ
ಪರಬ್ರಹ್ಮ ವಿದ್ಯುತ್ ನಿರ್ನಾಮ ಅಜ್ಞಾನ ಆತ್ಮ ಸಾಕ್ಷಾತ್ಕಾರ
ದೇವಿ ಅಚೇತನ ಶಿವ ನಿಷ್ಕ್ರೀಯ ವಿನಾಃ ಕುಂಡಲಿನೀ ಧ್ಯಾನ
ನಿರ್ಗುಣಬ್ರಹ್ಮ ಶಿವ ಸಗುಣ ಶಕ್ತಿ ಸಂಗಮ ಶಿವಶಕ್ತಿಗೆ ಚೇತನ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%A7-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A6%E0%B3%AA%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A6%E0%B3%AD%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/1-6-2013/41040

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 104-107 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-104-107.html

ನಿಮ್ಮ ಟಿಪ್ಪಣಿ ಬರೆಯಿರಿ