೦೦೫೦. ನಿರ್ಗುಣಾ (೧೩೯), ನಿಷ್ಕಲಾ (೧೪೦), ಶಾಂತಾ (೧೪೧), ನಿಷ್ಕಾಮಾ (೧೪೨) (ಶ್ರೀ ಲಲಿತಾ ಸಹಸ್ರನಾಮ ೧೩೯ರಿಂದ ೧೪೨ನೇ ನಾಮಗಳ ವಿವರಣೆ)

೦೦೫೦. ನಿರ್ಗುಣಾ (೧೩೯), ನಿಷ್ಕಲಾ (೧೪೦), ಶಾಂತಾ (೧೪೧), ನಿಷ್ಕಾಮಾ (೧೪೨) (ಶ್ರೀ ಲಲಿತಾ ಸಹಸ್ರನಾಮ ೧೩೯ರಿಂದ ೧೪೨ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೩೯ – ೧೪೨
_____________________________________

೧೩೯. ನಿರ್ಗುಣಾ
ಸತ್ವ ರಾಜಸ ತಾಮಸ ತ್ರಿಗುಣ, ದೇಹ ಸ್ಥೂಲಾಕಾರ ಕಾರಣ
ಕಾರಣೀಭೂತ ಮೂಲಪ್ರಕೃತಿ ಮಾಯ, ಅಶರೀರ ದೇವಿ ಗುಣ
ಸ್ವಪ್ರಕಾಶ ಬ್ರಹ್ಮ ಗುಣ-ಶರೀರ ರಹಿತ, ನಿರ್ಗುಣಾ ಶ್ರೀ ಲಲಿತ
ಸ್ವಯಂಸಿದ್ಧ ಬ್ರಹ್ಮ ಗುಣ ಸಮೃದ್ಧ, ಲಲಿತಾಂಬೇ ಬ್ರಹ್ಮವೆನುತ ||

೧೪೦. ನಿಷ್ಕಲಾ
ಸತ್ಯ ಸಾಕ್ಷಾತ್ಕಾರ ಬದ್ದತೆ ಬಯಸೊ ಮುಕ್ತಾತ್ಮನ ವರಿಸೆ
ನಿರಾವಯವ ಧ್ಯಾನವಷ್ಟೆ ಬ್ರಹ್ಮ ಮೂರ್ತರೂಪ ಬರಿ ನಶೆ
ಭಕ್ತ ಮನಸೇಂದ್ರೀಯಾವಯವ ಯಾತನಾನುಭವ ತರಿಸೆ
ನಿರವಯವ ಲಲಿತೆ ಧ್ಯಾನಿಸೆ ನಿಷ್ಕಲಾ ಮನಸಿನಾ ವರಸೆ ||

೧೪೧. ಶಾಂತಾ
ನಿರ್ಗುಣ ಬ್ರಹ್ಮಕೆಷ್ಟು ಲಕ್ಷಣ, ಪ್ರಶಾಂತತೆಗೂ ನಿರ್ಗುಣ
ಶಾಂತಿ ನೆಮ್ಮದಿ ಮನದ ವಿಕಾರಗಳ ತೊಳೆವ ಆಸ್ಥಾನ
ನೆಮ್ಮದಿ ನಿರಾತಂಕ ಸದಾ ದೇವಿ ಪ್ರಶಾಂತಿನಿ ಅನ್ವರ್ಥ
ಮೋಹಪಾಶ ವಿವರ್ಜಿತ ಆತ್ಮಸಾಕ್ಷಾತ್ಕಾರ ಶಾಂತಚಿತ್ತ ||

೧೪೨. ನಿಷ್ಕಾಮಾ
ಕಾಮನೆ ಮೋಹದೆಡೆಯಲ್ಲಿ ಇರದೆ, ಪ್ರಶಾಂತ ಮನ ಬಗಲಲ್ಲಿ
ಪ್ರಶಾಂತ ಬ್ರಹ್ಮ ಪರಿಪೂರ್ಣ, ಗುಣವಲ್ಲದ ನಿರ್ಗುಣ ಶೂನ್ಯದಲಿ
ಸತ್ಯಾತಿಸತ್ಯ ಬ್ರಹ್ಮ ಲಕ್ಷಣ ಅನಂತವೆ ಇಹಕನಂತವಾಗಿಸುತ
ಅನಂತೆ ಅನಂತೋತ್ಪತ್ತಿ ನಿಷ್ಕಾಮಾನಂತ ಬ್ರಹ್ಮಾಂಡ ಲಲಿತ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AB%E0%B3%A6-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A9%E0%B3%AF%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%AA%E0%B3%A8%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/21-6-2013/41219

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 139-142 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalaitha-sahasranamam-139-142.html

ನಿಮ್ಮ ಟಿಪ್ಪಣಿ ಬರೆಯಿರಿ