೦೦೪೪. ಭದ್ರಪ್ರಿಯಾ (೧೧೫), ಭದ್ರಮೂರ್ತಿಃ (೧೧೬), ಭಕ್ತ-ಸೌಭಾಗ್ಯ-ದಾಯಿನೀ (೧೧೭), ಭಕ್ತಿ-ಪ್ರಿಯಾ (೧೧೮), ಭಕ್ತಿ-ಗಮ್ಯಾ (೧೧೯) (ಶ್ರೀ ಲಲಿತಾ ಸಹಸ್ರನಾಮ ೧೧೫ ರಿಂದ ೧೧೯ನೇ ನಾಮಗಳ ವಿವರಣೆ)

೦೦೪೪. ಭದ್ರಪ್ರಿಯಾ (೧೧೫), ಭದ್ರಮೂರ್ತಿಃ (೧೧೬), ಭಕ್ತ-ಸೌಭಾಗ್ಯ-ದಾಯಿನೀ (೧೧೭), ಭಕ್ತಿ-ಪ್ರಿಯಾ (೧೧೮), ಭಕ್ತಿ-ಗಮ್ಯಾ (೧೧೯) (ಶ್ರೀ ಲಲಿತಾ ಸಹಸ್ರನಾಮ ೧೧೫ ರಿಂದ ೧೧೯ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೧೫-೧೧೯
____________________________

೧೧೫. ಭದ್ರಪ್ರಿಯಾ
ಹಾತೊರೆವ ಭಕ್ತ ಜನ, ಒಲಿಸೆ ನಾನಾ ವಿಧಾನ
ಭಕ್ತಪಾತ್ರರನಾಶೀರ್ವದಿಸೆ ಕಾತುರ ದೇವಿ ಮನ
ಪಾದ ಕಮಲಾ ಚರಣ ಶರಣಾಗತ ಕೃಪಾಭರಣ
ಸುಪ್ರೀತೆ ವರ್ಷಿಸುತೆ ಲಲಿತೆ ಭಕ್ತರಿಗೆಲ್ಲ ಕರುಣ ||

೧೧೬. ಭದ್ರಮೂರ್ತಿಃ
ಮಂಗಳಕರ ದೇವಿ ರೂಪ ಪವಿತ್ರಾತಿ ಪವಿತ್ರ
ಬ್ರಹ್ಮವೆ ಅನ್ವರ್ಥಿಸಿದ ಲಲಿತ ಲೀಲಾ ಪಾತ್ರ
ಪವಿತ್ರತೆಯೆ ಮೂರ್ತಿವೆತ್ತ ಶಕ್ತಿ ಭದ್ರಮೂರ್ತಿಃ
ತ್ರಿಮೂರ್ತಿಗಳಿಗು ಮಿಗಿಲೆನೆ ದೇವಿ ಪರಾಶಕ್ತಿ ಃ ||

೧೧೭. ಭಕ್ತ-ಸೌಭಾಗ್ಯ-ದಾಯಿನೀ
ಅರಿಶಿಣ ಹಳದಿ ವರ್ಣದ್ದೆಲ್ಲ ಸೂಚಕ ಸೌಭಾಗ್ಯನಿಧಿ
ನಂಬಿದ ಭಕ್ತಗೆಲ್ಲ ಸಂಪದ ಕರುಣಿಸೊ ಕರುಣಾನಿಧಿ
ಸೌಭಾಗ್ಯಾಷ್ಟಕದಿಂ ಹರಸೆ ಸಂಪತ್ತು ಸಮೃದ್ಧಿ ಭಾಗ್ಯ
ಕೊಟ್ಟು ಕಾಯುವಳು ನಮಿಸೆ, ಕಳೆದೆಲ್ಲ ದೌರ್ಭಾಗ್ಯ ||

೧೧೮. ಭಕ್ತಿ-ಪ್ರಿಯಾ
ಶಿವ ಪಾದ ಪದ್ಮಕೆ ಭಕ್ತಿ, ನದಿ ಸಾಗರ ಪ್ರೀತಿ
ಸೂಜಿಗಲ್ಲಿಗೆ ಸೂಜಿ, ಲತೆ ಮರವಪ್ಪಿದ ರೀತಿ
ತ್ರಿಗುಣಾತೀತ ಭಕ್ತಿ, ಬೆಳೆಯುತೇ ಅನವರತ
ಭಕ್ತಿ-ಪ್ರಿಯಾ ಸಾಕ್ಷಾತ್ಕಾರ, ಅಡ್ಡಿ ಆತಂಕವೆತ್ತ ||

೧೧೯. ಭಕ್ತಿ-ಗಮ್ಯಾ
ಶುದ್ಧ ಭಕ್ತಿಯ ಪ್ರೀತಿಯೆ, ದೇವಿಯೊಲಿಸೆ ದಾರಿ
ಭಕ್ತಿ ಮಾರ್ಗದ ಪ್ರಜ್ಞೆ, ಬ್ರಹ್ಮವರಿಯೇ ರಹದಾರಿ
ಸಾಕಾರ ನಿರಾಕಾರ ಬ್ರಹ್ಮಾನ್ವೇಷಣೆಗೆ ಎರಡಾಗ
ದೈವಕೃಪೆಗೆ ಭಕ್ತಿ, ಸ್ವಪ್ರಯತ್ನವಿರೆ ಜ್ಞಾನ ಮಾರ್ಗ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%AA-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A7%E0%B3%AB-%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A7%E0%B3%AF%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/17-6-2013/41188

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 115-119 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-115-119.html

ನಿಮ್ಮ ಟಿಪ್ಪಣಿ ಬರೆಯಿರಿ