೦೦೩೦.ಜ್ವಾಲಾಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ (೭೧) (ಶ್ರೀ ಲಲಿತಾ ಸಹಸ್ರನಾಮ ೭೧ನೇ ನಾಮದ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಜ್ವಾಲಾಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ (೭೧)

೩೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೭೧
__________________________________

೭೧. ಜ್ವಾಲಾಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ
ಚತುರ್ದಶಿ ತಿಥಿಯಧಿದೇವತೆ ಜ್ವಾಲಾಮಾಲಿನಿ ಪುನೀತೆ
ಕಟ್ಟಿದಾ ಅಗ್ನಿ ಕೋಟೆಯ ನಡುವಲೆ ಶ್ರೀ ಲಲಿತೆ ನಿವಸಿತೆ
ಷೋಡಶ ತಿಥಿ ಅಮಾವಾಸೆ ಪೌರ್ಣಿಮೆಗೊಡತಿಯೆ ದೇವಿ
ಭಂಡಾಸುರ ಕದನ ಕೋಟೆ ನವ ಶಿವಶಕ್ತಿ ಚಕ್ರ ನಡು ತಾಯಿ ||

A additional explanations

ಪರಮಾತ್ಮ ಪ್ರಿಯ ಜ್ಞಾನಿ ಪರಿಣಿತನರಿತಿಹ ಪರಬ್ರಹ್ಮ
ಸಂಸಾರ ಚಕ್ರ ಶುದ್ಧ ಜನ್ಮಾಂತರಕು ಅರಿತ ಸೃಷ್ಟಿಧರ್ಮ
ಜ್ವಾಲಾ ಕಿರಣ ದಹಿಸಿ ಅಜ್ಞಾನದಂಧಕಾರದ ವಿನಾಶವೆ
ಪರಬ್ರಹ್ಮ ಸಾಕ್ಷಿ, ಜ್ಯೋತಿ ದಹಿಸದ ಬ್ರಹ್ಮಸಾಕ್ಷಾತ್ಕಾರವೆ ||

ಸೃಷ್ಟಿ ಸ್ಥಿತಿ ಲಯ ಕಾರಣಕರ್ತೆ ಕ್ರಿಯಾ ಸಾಕ್ಷೀಭೂತೆ ಲಲಿತೆ
ಪರಂಜ್ಯೋತಿ ಪ್ರಜ್ವಲಿತೇ ದಹಿಸದ ಪರಬ್ರಹ್ಮ ದ್ಯುತಿ ನಿರ್ಲಿಪ್ತೆ
ಭೌತಿಕ ಕ್ರಿಯ ಅನವಲಂಬಿತ ಅವಿಚಲಿತ ಜ್ಞಾನಿ ಲೀನಾ ಬ್ರಹ್ಮ
ಪೂರ್ಣ ಪ್ರಜ್ಞಾಂಕಿತ ಸದಾ ಚಿಂತಿತ ಪರಬ್ರಹ್ಮವೆ ಮನ ಮರ್ಮ ||

ಅಹಂ ಬ್ರಹ್ಮಾಸ್ಮಿ ಸಾಧನ ಜ್ಞಾನ ಮಾರ್ಗ, ಭಕ್ತಿ ಮಾರ್ಗದ ಸವಾರಿ
ಬ್ರಹ್ಮ ಸಾಕ್ಷಾತ್ಕಾರದೆಡೆಗೆ ಪಯಣ, ನಾನವನೆ ನಾನವನವನೆ ಏರಿ
ಜನ್ಮ ಜನ್ಮ ಕರ್ಮಾಂತರ ಹಾದಿ, ಹಂತಂತ ಅನುಭವ ಭಕ್ತಿ ಮಾರ್ಗ
ಕಠಿಣತಮ ನಿಗ್ರಹ ದೃಢ ಇಚ್ಛಾ ಶಕ್ತಿ ವಿವೇಕಾಯುತ ಜ್ಞಾನ ಮಾರ್ಗ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A9%E0%B3%A6-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AD%E0%B3%A7%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%A6-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/21-5-2013/40934

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 71 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-71.html

ನಿಮ್ಮ ಟಿಪ್ಪಣಿ ಬರೆಯಿರಿ