೦೦೫೩. ನಿರುಪಾಧಿಃ (೧೫೪), ನಿರೀಶ್ವರಾ (೧೫೫), ನಿರಾಗಾ (೧೫೬), ರಾಗಮಥನೀ (೧೫೭) (ಶ್ರೀ ಲಲಿತಾ ಸಹಸ್ರನಾಮ ೧೫೪ರಿಂದ ೧೫೭ನೇ ನಾಮಗಳ ವಿವರಣೆ)

೦೦೫೩. ನಿರುಪಾಧಿಃ (೧೫೪), ನಿರೀಶ್ವರಾ (೧೫೫), ನಿರಾಗಾ (೧೫೬), ರಾಗಮಥನೀ (೧೫೭)(ಶ್ರೀ ಲಲಿತಾ ಸಹಸ್ರನಾಮ ೧೫೪ರಿಂದ ೧೫೭ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೫೪ – ೧೫೭
______________________________________

೧೫೪. ನಿರುಪಾಧಿಃ
ಸ್ಪಟಿಕ ಶುಭ್ರ ಪಾರದರ್ಶಕ ಲಲಿತೆ ವರ್ಣರಹಿತೆ ರೋಹಿತೆ
ಜ್ಞಾನಾಜ್ಞಾನಾತೀತೆ ಅಪರಿಮಿತೆ ಪ್ರತಿಫಲನವಿರದ ಮಾತೆ
ಕಣ್ಣಿಗೆ ಕಾಣಲಷ್ಟೆ ಉಪಾಧಿ ಅನಂತಾಗಸದ ತರ ತಳಹದಿ
ಸರ್ವಮಿತಿಗತೀತ ಬ್ರಹ್ಮವೆ ಲಲಿತೆ, ನಿರುಪಾಧಿಯೆ ಪರಿಧಿ ||

[ ಜ್ಞಾನಾಜ್ಞಾನಾತೀತೆ = (ಜ್ಞಾನ+ಅಜ್ಞಾನ+ಅತೀತೆ) ಎನ್ನುವ ಅರ್ಥದಲ್ಲಿ ಬಳಸಿದ್ದು ]

೧೫೫. ನಿರೀಶ್ವರಾ
ಗುಣ ಲಕ್ಷಣವಿರದ ಬ್ರಹ್ಮಕೆ, ವರ್ಣಿಸಲ್ಹೇಗೊ ಗುಣ ಲಕ್ಷಣ
ಗುಣಗಳಲ್ಲವೆನ್ನುತಲೆ ಅದು ನಾನೆ ಎಂದು ಹೇಳುವ ಗುಣ
ಪರಮ ಪಾಲಕಿ ವರಿಷ್ಟೆ ಒಡತಿಯಾಗೆಲ್ಲ ಸೃಷ್ಟಿ ಸ್ಥಿತಿ ಲಯ
ಶಕ್ತಿಯಾಡಳಿತದಲಿ ಶಿವನೂ, ವೀಕ್ಷಕನಷ್ಟೆ ಲಲಿತಾಮಯ ||

೧೫೬. ನಿರಾಗ
ಅಂತಃಕರಣದಂತರ್ಗತ, ಬುದ್ಧಿ ಮನಸು ಚಿತ್ತ, ಅಹಂಕಾರ
ಆಸೆ ಕೋಪ ಹೊಟ್ಟೆಕಿಚ್ಚು ಗೊಂದಲ, ಗರ್ವ ದ್ವೇಷ ಜತೆಗಾರ
ಅಂತಃಕರಣ ಅಡಚಣೆ ಜೋಡಿ, ಬಿಡದಾ ಆತ್ಮ ಸಾಕ್ಷಾತ್ಕಾರ
ರಾಗಮುಕ್ತರಾಗೆ ಆಶಾರಹಿತ ದೇವಿ, ತೆರೆಯಳೇ ಬ್ರಹ್ಮದ್ವಾರ ||

೧೫೭. ರಾಗಮಥನೀ
ಅಜ್ಞಾನವೆ ಅಡಚಣೆ, ಅಡ್ಡ ಪರಿಣಾಮಗಳೆ ಪಾತಾಳಕೆ ಮೇನೆ
ಅಹಂಕಾರ ಮೋಹ ದ್ವೇಷ, ಜೋತು ಬಿದ್ದ ಸಂಸಾರದ ಬೇನೆ
ಬಿಡಿಸೆ ಪ್ರಾಪಂಚಿಕ ಬಂಧನ, ಭಕ್ತರಾಸೆ ಪೂರೈಕೆ ದೇವಿ ಗಮನ
ಆಧ್ಯಾತ್ಮಿಕ ಪಥದಿ ಕುತ್ತ ನಿವಾರಿಸುತ, ಪರಬ್ರಹ್ಮದತ್ತ ಯಾನ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AB%E0%B3%A9-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%AB%E0%B3%AA%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%AB%E0%B3%AD%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/25-6-2013/41243

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 154-157 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/09/lalitha-sahasranamam-154-157.html

ನಿಮ್ಮ ಟಿಪ್ಪಣಿ ಬರೆಯಿರಿ