೦೦೫೫. ಮಮತಾ-ಹಂತ್ರೀ (೧೬೫), ನಿಷ್ಪಾಪಾ (೧೬೬), ಪಾಪನಾಶಿನೀ (೧೬೭), ನಿಷ್ಕ್ರೋಧಾ (೧೬೮), ಕ್ರೋಧ-ಶಮನೀ (೧೬೯) ಸರಣಿ: (ಶ್ರೀ ಲಲಿತಾ ಸಹಸ್ರನಾಮ ೧೬೫ರಿಂದ ೧೬೯ನೇ ನಾಮಗಳ ವಿವರಣೆ)

೦೦೫೫. ಮಮತಾ-ಹಂತ್ರೀ (೧೬೫), ನಿಷ್ಪಾಪಾ (೧೬೬), ಪಾಪನಾಶಿನೀ (೧೬೭), ನಿಷ್ಕ್ರೋಧಾ (೧೬೮), ಕ್ರೋಧ-ಶಮನೀ (೧೬೯) ಸರಣಿ: (ಶ್ರೀ ಲಲಿತಾ ಸಹಸ್ರನಾಮ ೧೬೫ರಿಂದ ೧೬೯ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೬೫-೧೬೯
_____________________________

೧೬೫. ಮಮತಾ-ಹಂತ್ರೀ
ಬ್ರಹ್ಮ ಸಾಕ್ಷಾತ್ಕಾರಕೆ ಅಡಚಣೆ – ಅಹಂಕಾರ
ಉಂಟು ಮಾಡುವ ಸ್ವಾರ್ಥವೆ ನೂರೆಂಟು ತರ
ಭಕ್ತ ಸ್ವಾರ್ಥ ಅಳಿಸುತ, ದೇವಿ ಮಹಾ ಧಾತ್ರಿ
ಬ್ರಹ್ಮಕಡೆತಡೆ ನಿವಾರಿಸೊ, ಮಮತಾ-ಹಂತ್ರೀ ||

೧೬೬. ನಿಷ್ಪಾಪಾ
ಆಸೆಯೆ ಪಾಪದ ಮೂಲ, ಲಲಿತೆಗೆಲ್ಲಿದೆ ಆಶಾ
ದೇವಿ ನಿರಾಗಾ ಬಲ, ಪಾಪ ರಹಿತಾ ಸ್ವರೂಪ
ಪ್ರಭಾವಿತವಾಗದ ಪ್ರತಿಫಲಾಪೇಕ್ಷಿಸದ ರೂಪ
ಸಾಧಿಸೊ ಭಕ್ತಗಣಕೆ ತೊಳೆವಳೆಲ್ಲ ತರ ಪಾಪ ||

೧೬೭. ಪಾಪನಾಶಿನೀ
ಸದಾ ಸ್ಮರಿಸುವ ನಿಜ ಭಕ್ತ, ಮಂತ್ರಾಚರಣೆ ನೇಪಥ್ಯ
ಪ್ರಾಮಾಣಿಕ ಪೂಜೆಗೆ, ಸುಟ್ಟು ಹೋಗಿ ಪಾಪವೆ ಮಿಥ್ಯ
ಅನುಭವಿಸುತಲಷ್ಟೆ ಜನ್ಮಾಂತರಾ ಪ್ರಾರಬ್ದದ ಚೂರ್ಣ
ಪಾಪದ ಹೊರೆಯಿಳಿಸುವ ಪಾಪನಾಶಿನಿ ಅಂತಃಕರಣ ||

೧೬೮. ನಿಷ್ಕ್ರೋಧಾ
ಆಸ್ತಿಕನೋ ನಾಸ್ತಿಕನೋ ಕೋಪಿಸಳು ಲಲಿತಾ
ದ್ವೇಷಾ-ಆತ್ಮೀಯತೆ ಗಣಿಸದ ಬ್ರಹ್ಮವೆ ನಿರ್ಲಿಪ್ತ
ಭಕ್ತಿಯವತರಿಸದೆ ಅರಿಯಲ್ಹೇಗೆ ಕೃಪಾ ಸುಧಾ
ಪ್ರಳಯಕಾಲಕು ಶಾಂತಿ ತೋರುವ ನಿಷ್ಕ್ರೋಧಾ ||

೧೬೯. ಕ್ರೋಧ-ಶಮನೀ
ವಸ್ತು ವಿಷಯಾಸಕ್ತಿ ಚಿಂತಿಸೆ, ಬಿತ್ತೊ ಮೋಹ
ಬೀಜ ಬೆಳೆದು ಆಸೆಯ ಸಸಿ, ಕ್ರೋಧಕೆ ದಾಹ
ಅಡ್ಡಿಯಾಗಿ ಆತ್ಮಕೆ, ಸಾಕ್ಷಾತ್ಕಾರ ಸರ್ವನಾಶ
ಶಮನಗೊಳಿಸಿ ಭಕ್ತ ಕ್ರೋಧ, ಗೆಲಿಸೊ ಪ್ರಕಾಶ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AB%E0%B3%AB-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%AC%E0%B3%AB%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%AC%E0%B3%AF%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/26-6-2013/41252

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 165-169 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/09/lalitha-sahasranamam-165-169.html

ನಿಮ್ಮ ಟಿಪ್ಪಣಿ ಬರೆಯಿರಿ