೦೦೪೮. ಶರಶ್ಚಂದ್ರನಿಭಾನನಾ (೧೨೯), ಶಾತೋದರೀ (೧೩೦), ಶಾಂತಿಮತೀ (೧೩೧), ನಿರಾಧಾರಾ (೧೩೨), ನಿರಂಜನಾ (೧೩೩) (ಶ್ರೀ ಲಲಿತಾ ಸಹಸ್ರನಾಮ ೧೨೯ ರಿಂದ ೧೩೩ನೇ ನಾಮಗಳ ವಿವರಣೆ)

೦೦೪೮. ಶರಶ್ಚಂದ್ರನಿಭಾನನಾ (೧೨೯), ಶಾತೋದರೀ (೧೩೦), ಶಾಂತಿಮತೀ (೧೩೧), ನಿರಾಧಾರಾ (೧೩೨), ನಿರಂಜನಾ (೧೩೩) (ಶ್ರೀ ಲಲಿತಾ ಸಹಸ್ರನಾಮ ೧೨೯ ರಿಂದ ೧೩೩ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೨೯ – ೧೩೩
_______________________________

೧೨೯. ಶರಶ್ಚಂದ್ರನಿಭಾನನಾ
ಶರತ್ಕಾಲೆ ಚಂದ್ರಮ, ಅತಿ ಪ್ರಜ್ವಲ ಉಜ್ವಲ ಶುಭ್ರ
ಕಲಾಹೀನ ಕಳಾಪೂರ್ಣ, ಬೆಳಗೊ ಆಕಾಶ ನಿರಭ್ರ
ಶರದೃತು ಸದಾ ಸರ್ವದ, ದೇವೀ ಶಶಾಂಕ ವದನ
ಪ್ರತಿ ಋತುವೂ ತಿಂಗಳ, ಕಂಗೊಳಿಸೊ ಲಲಿತಾನನ ||

೧೩೦. ಶಾತೋದರೀ
ಲಲಿತಾ ಸಿಂಹ ವಾಹಿನಿ ದೈತ್ಯ ದಮನಾಗ್ರಣಿ
ಸಿಂಹ ಕಟಿಯನುಟ್ಟೆ, ಅಡಗಿಸೇ ದುಷ್ಟರ ದನಿ
ಕಾಮಕಲಾ ರೂಪಚಿತ್ರಣ, ಕಾಮವನೆ ಗೆದ್ದವನ
ಕೈ ಹಿಡಿದೆತ್ತಿ ದೇವಿ ಪರಬ್ರಹ್ಮಕೊಯ್ಯೆ ಜತನ ||

೧೩೧. ಶಾಂತಿಮತೀ
ಭಕ್ತವತ್ಸಲೆ ಲಲಿತೆ, ಮೃದುಲ ಭಾವದೆ ಸಹಿಸುತೆ
ಶಾಂತ ಮತಿಯಲೆ ಯೋಗ್ಯ ಭಕ್ತ ಕೃತ್ಯ ಸೈರಿಸುತೆ
ಸಹನಾತೀತ ಮಿತಿ ದಾಟಿದರಾಗದಿಹರೆ ಆಹುತಿ
ಅಳುಕದೆ ತಿದ್ದೆ ಅಶ್ವಾರೂಢ ವಾರಾಹಿಗಳ ಸನ್ಮತಿ ||

೧೩೨. ನಿರಾಧಾರಾ
ಅನಂತಕೆಲ್ಲಿದೆ ಅಂತ, ಮಿತಿಗಷ್ಟೇ ಮೃತ್ಯು ಸ್ವಂತ
ಧಿಕ್ಕರಿಸಿ ಸ್ವಯಂಬಲ ಸಹಿತ ನಿರಾಧಾರಾಧ್ಭುತ
ಅಂತೆ ಶಕ್ತಿ ಪೂಜೆ ಆಂತರಿಕ ಸಾಕಾರ ನಿರಾಕಾರ
ಬಾಹ್ಯಪೂಜೆಗೆ ಮಿಗಿಲೆ ಶೀಘ್ರ ಆತ್ಮ ಸಾಕ್ಷಾತ್ಕಾರ ||

೧೩೩. ನಿರಂಜನಾ
ಅಂಜನಕೆ ಅಂಜನ ನಿರಂಜನಾಕ್ಷಿ ಲಲಿತಾಂಬಿಕೆ
ಅಜ್ಞಾನಾಂಜನರಹಿತೆ ನಿರಂಜನ ಹೆಸರೆ ಬೆಳಕೆ
ಕಳಂಕರಹಿತೆ ನಿರ್ಗುಣ ಬ್ರಹ್ಮರೂಪೆ ಕುಂಡಲಿನಿ
ಆಜ್ಞಾಚಕ್ರದೇ ನಿಷ್ಕಳಂಕ ಛವಿ ತೋರಳೆ ಜನನಿ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%AE-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A8%E0%B3%AF-%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A9%E0%B3%A9%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/20-6-2013/41204

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 129-133 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-129-133.html

ನಿಮ್ಮ ಟಿಪ್ಪಣಿ ಬರೆಯಿರಿ