೦೦೫೬. ನಿರ್ಲೋಭಾ (೧೭೦), ಲೋಭನಾಶಿನೀ (೧೭೧), ನಿಃಸಂಶಯಾ (೧೭೨), ಸಂಶಯಘ್ನೀ (೧೭೩), ನಿರ್ಭವಾ (೧೭೪), ಭವನಾಶಿನೀ (೧೭೫) (ಶ್ರೀ ಲಲಿತಾ ಸಹಸ್ರನಾಮ ೧೭೦ ರಿಂದ ೧೭೫ನೇ ನಾಮಗಳ ವಿವರಣೆ)

೦೦೫೬. ನಿರ್ಲೋಭಾ (೧೭೦), ಲೋಭನಾಶಿನೀ (೧೭೧), ನಿಃಸಂಶಯಾ (೧೭೨), ಸಂಶಯಘ್ನೀ (೧೭೩), ನಿರ್ಭವಾ (೧೭೪), ಭವನಾಶಿನೀ (೧೭೫) (ಶ್ರೀ ಲಲಿತಾ ಸಹಸ್ರನಾಮ ೧೭೦ ರಿಂದ ೧೭೫ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೭೦ – ೧೭೫
____________________________

೧೭೦. ನಿರ್ಲೋಭಾ
ಲೋಭ ದುರಾಸೆಯಿಲ್ಲದವಳಾಗಿ ಬ್ರಹ್ಮ ಲಲಿತೆ
ತನ್ನದೆಲ್ಲವ ಭಕ್ತಗೆ, ದಯಪಾಲಿಸೊ ಉದಾರತೆ
ಪಡೆದೆಲ್ಲಾ ಕರುಣೆ, ನಿರ್ಲೋಭಿಯಾಗದ ಹೊಣೆ
ಭಕ್ತನಿಗಿರೆ ಮುಕ್ತಿ ಪಥಕೆ, ನಡೆಸೆ ದೇವಿ ನಿಪುಣೆ ||

೧೭೧. ಲೋಭನಾಶಿನೀ
ಕಾಮ ಕ್ರೋಧ ಲೋಭ ಮೂರು ನರಕದ ದ್ವಾರ
ಆತ್ಮ ವಿನಾಶಕೆ ದಾರಿ ತೆರೆಯುವಾ ಭಯಂಕರ
ಮನ ನುಗ್ಗಿದ ಚೋರರೆ ಕಾಡುತ್ತಲೆ ಸಾಮಾನ್ಯರ
ಭಕ್ತರಿಗಿಲ್ಲ ಚಿಂತೆ ಲೋಭ ವಿನಾಶ ದೇವಿಯ ವರ ||

೧೭೨. ನಿಃಸಂಶಯಾ
ಅರಿವನರಸಿ ಹೊರಟಿಹ ಅಜ್ಞಾನಿ ಜನ ಮನುಜ
ಜ್ಞಾನಾರ್ಜನೆ ಪಥದಲಿ ಸಂಶಯ ಕಾಡೇ ಸಹಜ
ಜ್ಞಾನದ ಮೂರ್ತ ರೂಪವೆ ನಂಬಿದರೆ ಲಲಿತೆಯ
ಹರಿಸೆಲ್ಲ ಸಂಶಯ, ಹರಸುವಳು ನಿಃಸಂಶಯಾ ||

೧೭೩. ಸಂಶಯಘ್ನೀ
ಬ್ರಹ್ಮವನರಿತವಗೆ ಸಂಶಯವೆಲ್ಲಾ ಮಾಯ
ಸಂಶಯಾತೀತ ಜ್ಞಾನ ರೂಪಿ ದೇವಿ ಅಭಯ
ಮಂತ್ರ ಯೋಗ ಬ್ರಹ್ಮಜ್ಞಾನಗಳ ಗುರು ವರ್ಗ
ಬ್ರಹ್ಮವೆ ಲಲಿತೆ ನಿವಾರಿಸೆ ಸಂಶಯ ಮಾರ್ಗ ||

೧೭೪. ನಿರ್ಭವಾ
ಆದ್ಯಂತ ರಹಿತಕೆ ಒಡೆಯನವನಾಗಿ ಪರಬ್ರಹ್ಮ
ಆದಿ ಅನಾದಿಯೆ ದೇವಿ ಮೂಲವಿಲ್ಲದ ಪ್ರಥಮ
ಯಾರೂ ಸೃಷ್ಟಿಸದ ಶಿವ, ಶಕ್ತಿಯಾಗಿ ಸಂಯುಕ್ತ
ಸಾಕಾರವೆ ಬ್ರಹ್ಮ ರೂಪ- ನಿರ್ಭವಾ ಹೆಸರಾಯ್ತ ||

೧೭೫. ಭವನಾಶಿನೀ
ಜನನ ಮರಣಾ ನಿರಂತರ ಚಕ್ರವೆ ಸಂಸಾರ
ಮೋಹಬಂಧನ ಕಾರಣ ಹೆಗಲೇರಿದ ಭಾರ
ಪೂಜಿಸೆ ನಿರಾಕಾರ ಮುಕ್ತವಾಗಿಸುತೆ ಜನನಿ
ಪರಿಹರಿಸಿ ಚಕ್ರಬಂಧ ಸಲಹುವ ಭವನಾಶಿನೀ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AB%E0%B3%AC-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%AD%E0%B3%A6%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%AD%E0%B3%AB%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/27-6-2013/41259

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 170 -175 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/09/lalitha-sahasranamam-170-175.html

ನಿಮ್ಮ ಟಿಪ್ಪಣಿ ಬರೆಯಿರಿ