೦೦೦೯. ಶ್ರೀ ಮಾತಾ (೧), ಶ್ರೀ ಮಹಾರಾಜ್ಞೀ (೨) (ಲಲಿತಾ ಸಹಸ್ರನಾಮ ೧ ಮತ್ತು ೨ರ ವಿವರಣೆ)

0009. ೦೦೦೯. ಶ್ರೀ ಮಾತಾ (೧), ಶ್ರೀ ಮಹಾರಾಜ್ಞೀ (೨) (ಲಲಿತಾ ಸಹಸ್ರನಾಮ ೧ ಮತ್ತು ೨ರ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

೯. ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೧ ಮತ್ತು ೨
_____________________________

೧.೧ ಶ್ರೀ ಮಾತಾ

ಮಾತೆಗಳಾ ಮಾತೆ ಬ್ರಹ್ಮಾಂಡದ ತಾಯಿ ಲಲಿತೆ
ಆವಿರ್ಭಾವ ಪ್ರಪಂಚ ನಡೆಸಾಣತಿ ಲಯ ಲೀನತೆ
ಸಂಸಾರ ಸಾಗರ ಅಡೆತಡೆ ಕಡೆಗಾತ್ಮಸಾಕ್ಷಾತ್ಕಾರ
ಈಜುತೆ ಪ್ರವಾಹದೆದುರೆ ದಾಟಿಸುತಲಿ ಸಂಸಾರ ||

ಲಕ್ಷ್ಮಿ ಸರಸ್ವತಿ ರುದ್ರಾಣಿಯರ ತಾಯೆ ಶ್ರೀ ಮಾತ
ಶ್ರೀ ಎನ್ನುವ ಮಹತ್ತರ ಶ್ರೀ ಪಂಚಕಗಳಲಿ ಪೂಜಿತ
ಶ್ರೀ ಪುರ ಚಕ್ರ ವಿದ್ಯಾ ಸೂಕ್ತ ಗುರು ತಂತ್ರಶಾಸ್ತ್ರವೆ
ಸೃಷ್ಟಿಯೆ ದೇವಿ ಪ್ರಥಮ ಕ್ರಿಯೆ ಜಗನ್ಮಾತೆ ವರವೆ ||

೧.೨ ಶ್ರೀ ಮಾತಾ
ಶ್ರೀ ಮಾತಾ ಬ್ರಹ್ಮಾಂಡ ನೀ ಸೃಷ್ಟಿ ಸ್ಥಿತಿ ಲಯ ಕರ್ತೆ
ಸಂಸಾರ ಚಕ್ರ ಜನನಮರಣ ಜೀವನ ಸಾಗರ ಮುಕ್ತೆ
ಬ್ರಹ್ಮ ಸಾಕ್ಷಾತ್ಕಾರಾರ್ಥ ಪುನರ್ಜನ್ಮ ವಿಮುಕ್ತಿ ದಾತೆ
ಪುರ ಚಕ್ರ ವಿದ್ಯಾ ಸೂಕ್ತ ಗುರು ಶ್ರೀಪಂಚಕ ಆರಾಧಿತೆ
ಪರಬ್ರಹ್ಮವೆ ಲಲಿತೆ ಸೃಷ್ಟಿಕ್ರಿಯಾ ಪ್ರಥಮ ಶ್ರೀಮಾತೆ
ವೇದಶಾಸ್ತ್ರ ಆವಿರ್ಭಾವಿನಿ ಶ್ರೀ ಲಲಿತಾಂಬಿಕೆ ನಮಸ್ತೆ ||

೨. ಶ್ರೀ ಮಹಾರಾಜ್ಞೀ
ನಿಗೂಢ ಶಕ್ತಿಯುತ ಬೀಜಾಕ್ಷರ, ನಾಮಾವಳಿಯಂತರ್ಗತೆ
ಷೋಡಶೀ ಪರಮ ಮಂತ್ರ, ‘ಪಂಚದಶೀ’ಗೆ ಬೀಜಾಕ್ಷರ ಜತೆ
ಕ್ರಮಬದ್ಧ ವಿಧಿ ವಿಧಾನದಲುಚ್ಚರಿಸೆ ನವ ಲಕ್ಷ ಸಲ ಭಕ್ತಾ
ಜಗ ಪರಿಪಾಲಿಪ ಮಹಾರಾಣಿ, ಪುನರ್ಜನ್ಮ ವಿಮುಕ್ತಿಸುತ ||

ಪ್ರಕೃತಿ ಚಲನ ಕ್ರಿಯಾಶೀಲ ವಿಶೇಷ ಶಕ್ತಿಯೆ ಕಲಾ
ನಿರ್ಗುಣ ಶಿವ ಪರಮೋನ್ನತ ಸಗುಣವೆ ಕಲಾಸಕಲ
ಷೋಡಶ ಸ್ವರ ಪರಿಪೂರ್ಣ ಕಲಾಪೂರ್ಣೆ ಶ್ರೀ ಮಾತ
ಷೋಡಶದಲಿ ಭಾಗಾಂಶವೆ ಹದಿನಾರಾ ಬಿಂಬಿಸುತ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AF-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7-%E0%B2%AE%E0%B2%A4%E0%B3%8D%E0%B2%A4%E0%B3%81-%E0%B3%A8%E0%B2%B0-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/26-4-2013/40753

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 1-2 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/07/lalitha-sahasranamam-12.html

ನಿಮ್ಮ ಟಿಪ್ಪಣಿ ಬರೆಯಿರಿ