೦೦೨೧. ಮರಾಲೀ-ಮಂದ-ಗಮನಾ (೪೭), ಮಹಾ-ಲಾವಣ್ಯ-ಶೇವಧಿಃ (೪೮), ಸರ್ವಾರುಣ (೪೯), ಅನವದ್ಯಾಂಗಿ (೫೦), ಸರ್ವಾಭರಣ ಭೂಷಿತಾ (೫೧), ಶಿವ-ಕಾಮೇಶ್ವರಾಂಕಸ್ಥಾ (೫೨) (ಶ್ರೀ ಲಲಿತಾ ಸಹಸ್ರನಾಮ ೪೭ರಿಂದ ೫೨ನೇ ನಾಮಗಳ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಮರಾಲೀ-ಮಂದ-ಗಮನಾ (೪೭), ಮಹಾ-ಲಾವಣ್ಯ-ಶೇವಧಿಃ (೪೮), ಸರ್ವಾರುಣ (೪೯), ಅನವದ್ಯಾಂಗಿ (೫೦), ಸರ್ವಾಭರಣ ಭೂಷಿತಾ (೫೧), ಶಿವ-ಕಾಮೇಶ್ವರಾಂಕಸ್ಥಾ (೫೨)

೨೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೪೭ರಿಂದ ೫೨
__________________________________

೪೭. ಮರಾಲೀ-ಮಂದ-ಗಮನಾ
ಗುರುತ್ವಾ ವಿಕರ್ಷ ಶರೀರೆ ದೇವಿ ಹಂಸ ಗಂಭೀರ ಗಮನೆ
ತೇಲಿದ ಭೂ ಸ್ಪರ್ಷ ನಡಿಗೆ ನಡೆಯೋ ನಾಟ್ಯವೊ ತಾನೆ
ಸರಿಗಟ್ಟಲಾದೀತೇ ಹಂಸಕು ಲಲಿತೆಗೆ ಸದಾ ಸನ್ನಿಹಿತ
ಅನುಕರಿಸನುಸರಿಸುತೆ ಮಾತೆ ಪಾದಪದ್ಮ ಬಿಡದಪ್ಪುತ ||

೪೮. ಮಹಾ-ಲಾವಣ್ಯ-ಶೇವಧಿಃ
ಅನುಪಮ ಸೌಂದರ್ಯಾತಿಶಯ ಉಪಮಾತೀತ ರೂಪ ಸಮೃದ್ಧಿ
ಬ್ರಹ್ಮಾದಿಬ್ರಹ್ಮ ಮೂಕ ವಿಸ್ಮಿತರೆ ಹೋಲಿಸಲೆಲ್ಲಿ ಅಪರೂಪ ನಿಧಿ
ಅದ್ಬುತ ರೂಪ ಲಾವಣ್ಯ ಅಪ್ಸರೆಗೂ ಅಸೂಯೆ ಮೋಹಾವುತ್ಕರ್ಷ
ಇಣುಕು ನೋಟಕು ತಪಿಸುತೆ ಶಿವಲೀನಾ ವಿಫಲ ಯತ್ನದ ಪೌರುಷ ||

೪೯. ಸರ್ವಾರುಣ
ದೇದೀಪ್ಯಮಾನದೆ ಉರಿವ ಗೋಲ, ಸೂರ್ಯೋದಯಾಸ್ತಕೆ ಬದಲ
ತಂಪಾರಿಸಿ ಅರುಣ ಸಾರಥಿ ಕರುಣಾ ಮೂರುತಿ ಕೆಂಪಾಗುವ ಕಾಲ
ಸರ್ವೋದಯಿ ಸರ್ವಕಾಲೆ ಸರ್ವಾರುಣಿ ಲಲಿತೆ ಮೈಕಾಂತಿ ಘನತೆ
ಸರ್ವಾರತಿ ದ್ಯುತಿ ಚೆಲ್ಲುವಂತೆ ರೋಹಿತೇ ಮಾತೆ ಸಾಕ್ಷಿ ಬೇರೆ ಬೇಕೆ ||

೫೦. ಅನವದ್ಯಾಂಗಿ
ಬ್ರಹ್ಮವೆ ದೋಷ ರಹಿತ ನಿರ್ಗುಣಾ ಸಗುಣ ದೇವೀ ಸಹಿತ
ನಿರಾಕಾರ ನಿರ್ಗುಣಬ್ರಹ್ಮಾ ಸಾಕಾರ ಸಗುಣಬ್ರಹ್ಮ ಸಶಕ್ತ
ಲಲಿತಾಂಬೆಯಂಗಾಂಗಪೂರ ಸಗುಣಬ್ರಹ್ಮ ದೋಷರಹಿತ
ಸಮುದ್ರಿಕಾ ಶಾಸ್ತ್ರ ತನುಬದ್ದ, ಗುಣಲಕ್ಷಣ ಪರಿಪೂರ್ಣಿತ ||

೫೧. ಸರ್ವಾಭರಣ ಭೂಷಿತಾ
ಸಗುಣಾ ನಿರ್ಗುಣಾಂತರ್ಯ ಭೂಷಿತೆ ಜಗಜ್ಜನನಿ ಲಲಿತೆ
ಸುವಿಧ ವಿವಿಧ ಸಮೃದ್ದ ಸಾಲಂಕೃತ ಆಭರಣ ಭೂಷಿತೆ
ವಾಗ್ದೇವಿ ಸ್ತುತಿ ವಿಮರ್ಶಾ ಪ್ರಕಾಶಾ ದೇವಿ ಭೌತಿಕ ರೂಪ
ವೈಭವಾಡಂಬರ ಸಮೃದ್ಧಿ ಸರ್ವಾಭರಣ ಅಗಣಿತ ಸ್ವರೂಪ ||

೫೨. ಶಿವ-ಕಾಮೇಶ್ವರಾಂಕಸ್ಥಾ
ಸ್ವಯಂಪ್ರಕಾಶಿತ ಶಿವನೆಡ ತೊಡೆ ಪೀಠಸ್ಥೆ ಸಗುಣ ವಿಮರ್ಶಾ ರೂಪ
ಶಕ್ತಿ ಶಿವನೆಡದೆ ಆಸೀನ, ಪರಮಾತ್ಮನ ಹೃದಯ ದೇಗುಲ ಸಮೀಪ
ಶಿವ ಹೃದಯವೆ ದೇವಿ ಅಪರಿಮಿತ ಪ್ರೀತ್ಯರ್ಥ ಸೂಚಿತ ಆತ್ಮೀಯತೆ
ಶಿವ ಕಾಮೇಶ್ವರಾಂಕಸ್ಥಾ ಶ್ರೇಷ್ಟ ಧ್ಯಾನಭಂಗಿ ಶಿವ ಶಿವೆ ಜತೆ ಪೂಜಿತೆ ||

Addition
ಮಂಗಳಾಧಿಪತಿ ಜ್ಞಾನರೂಪಿ ಶಿವ ಕಾಮೇಶ್ವರ ಸಹಯೋಗ ಸ್ಥಿತ
ಸಗುಣ ಜಡ ಪರಬ್ರಹ್ಮ ಚರ ಶಕ್ತಿ ದೇವೈಕ್ಯತೆ ಸೃಷ್ಟಿಗೆ ಮುಹೂರ್ತ
ಕಾಮವಲ್ಲ ಕಾಮನೆಯಲ್ಲ ಪರಮೋನ್ನತ ಬ್ರಹ್ಮಾಂಡ ಸೃಷ್ಟಿಸೂತ್ರ
ಶಿವ ಶಕ್ತಿ ಅಚರಾಚರ ಮಿಲನ ಸೃಷ್ಟಿ ಮಿಲನ ಮಹೋತ್ಸವ ಗಾತ್ರ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A8%E0%B3%A7-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AA%E0%B3%AD%E0%B2%B0%E0%B2%BF%E0%B2%82%E0%B2%A6-%E0%B3%AB%E0%B3%A8%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/11-5-2013/40866

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 47-52 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/07/lalitha-sahasranamam-47-52.html

ನಿಮ್ಮ ಟಿಪ್ಪಣಿ ಬರೆಯಿರಿ