೦೦೪೯. ನಿರ್ಲೇಪಾ (೧೩೪), ನಿರ್ಮಲಾ (೧೩೫), ನಿತ್ಯಾ (೧೩೬), ನಿರಾಕಾರಾ (೧೩೭), ನಿರಾಕುಲಾ (೧೩೮) (ಶ್ರೀ ಲಲಿತಾ ಸಹಸ್ರನಾಮ ೧೩೪ರಿಂದ ೧೩೮ನೇ ನಾಮಗಳ ವಿವರಣೆ)

೦೦೪೯. ನಿರ್ಲೇಪಾ (೧೩೪), ನಿರ್ಮಲಾ (೧೩೫), ನಿತ್ಯಾ (೧೩೬), ನಿರಾಕಾರಾ (೧೩೭), ನಿರಾಕುಲಾ (೧೩೮) (ಶ್ರೀ ಲಲಿತಾ ಸಹಸ್ರನಾಮ ೧೩೪ರಿಂದ ೧೩೮ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೩೪ – ೧೩೮
________________________________

೧೩೪. ನಿರ್ಲೇಪಾ
ಕ್ರಿಯಾಕರ್ಮಾತೀತೆ ಲಲಿತೆ ಮೋಹಬಂಧ ವಿಮುಕ್ತೆ
ಭಕ್ತ ಮೋಹಿತೆ ಕರ್ಮ ಕಳೆದವರೊಳಗೇ ಆವಾಹಿತೆ
ಸೂಕ್ತ ಭಕ್ತ ತನುಮನ ಸಶಕ್ತ ಜೀವಾಭಾವ ಸಂಬಂಧ
ದೇವಿ ಜ್ಞಾನದೆ ಪರಿಶುದ್ಧ ನಿರ್ಲೇಪಿಸುತ ಭಕ್ತನ ಸದ ||

೧೩೫. ನಿರ್ಮಲಾ
ಮಲಿನ ಮನ ವಿಕಲಾಂಗ ಇಹ ಮೋಹ ಜೀವನ
ಅಹಂಮೂಲ ಅಜ್ಞಾನ ಬಿಡ ಪರಮಾತ್ಮಾದರ್ಶನ
ದೇವಿ ನಿರ್ಮಲೆ ಅಂತೆ ಮೋಹ ವಿಮುಕ್ತಗೆ ಜ್ಞಾನ
ಅಣವಮಲ ಕತ್ತಲೆ ತೊಳೆಸೆ ಛವಿ ಲಲಿತಾಧ್ಯಾನ ||

೧೩೬. ನಿತ್ಯಾ
ಸರ್ವಾಂತರ್ಯಾಮಿ ನಿರ್ಗುಣ ಬ್ರಹ್ಮ ನಿತ್ಯ ನಿರಂತರ
ಅವಿನಾಶಿ ರೂಪರಹಿತ ನಿತ್ಯಾ ದೇವತ ಸಿದ್ದಿಗೆ ಮಂತ್ರ
ಷೋಡಶ ನಿತ್ಯಾ ಲಲಿತೆ, ಮಹಾತ್ರಿಪುರಸುಂದರಿ ಜತೆ
ಆಂತರಿಕ ಪೂಜೆಗೆ ಕಡೆ, ತ್ರಿದೇವಿ ನಿತ್ಯಾ ಅನ್ಯೋನ್ಯತೆ ||

೧೩೭. ನಿರಾಕಾರಾ
ನಿರ್ಗುಣಕೆಲ್ಲಿ ರೂಪಾ ನಿರಾಕಾರವೆ ಸ್ವರೂಪ
ಲಲಿತಾ ರೂಪರಹಿತ ಗುಣಲಕ್ಷಣಾಂತರ್ಗತ
ನಿರ್ಗುಣ ಬ್ರಹ್ಮ ಆಕಾರರಹಿತ ವಾಗ್ದೇವಿ ಚಿತ್ರ
ಆತ್ಮ ಸಾಕ್ಷಾತ್ಕಾರಪಥ ಇದ್ದೂ ಇರದ ಸಚಿತ್ರ ||

೧೩೮. ನಿರಾಕುಲಾ
ಗೊಂದಲ ವ್ಯಾಕುಲ ಉದ್ವೇಗ ಸಡಗರ ಕೋಲಾಹಲ
ಕಾರಣೀಭೂತಳೆ ಲಲಿತೆ ಸ್ಥಿತಪ್ರಜ್ಞೆ ತಾನಾಗಿ ಅಚಲ
ಮಾಯಾಜಾಲದೆ ಸಿಲುಕೊ ಸಾಧಕನಿಗಿತ್ತೇ ಅಜ್ಞಾನ
ಕಮಲಕಂಟದ ನೀರಂತೆ ತಾನಾಗಿ ಬರಿ ಶುದ್ಧ ಜ್ಞಾನ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AA%E0%B3%AF-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%A9%E0%B3%AA%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%A9%E0%B3%AE%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/20-6-2013/41213

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 134-138 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-133-138.html

ನಿಮ್ಮ ಟಿಪ್ಪಣಿ ಬರೆಯಿರಿ