೦೦೫೧. ನಿರುಪಪ್ಲವಾ (೧೪೩), ನಿತ್ಯ-ಮುಕ್ತಾ (೧೪೪), ನಿರ್ವಿಕಾರಾ (೧೪೫), ನಿಷ್ಪ್ರಪಂಚಾ (೧೪೬) (ಶ್ರೀ ಲಲಿತಾ ಸಹಸ್ರನಾಮ ೧೪೩ರಿಂದ ೧೪೬ನೇ ನಾಮಗಳ ವಿವರಣೆ)

೦೦೫೧. ನಿರುಪಪ್ಲವಾ (೧೪೩), ನಿತ್ಯ-ಮುಕ್ತಾ (೧೪೪), ನಿರ್ವಿಕಾರಾ (೧೪೫), ನಿಷ್ಪ್ರಪಂಚಾ (೧೪೬) (ಶ್ರೀ ಲಲಿತಾ ಸಹಸ್ರನಾಮ ೧೪೩ರಿಂದ ೧೪೬ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೪೩ – ೧೪೬
____________________________

೧೪೩. ನಿರುಪಪ್ಲವಾ
ಕುಂಡಲಿನಿ ಸೇರಿದಾಗ ಸಹಸ್ರಾರ ಗಮ್ಯ
ಅಮೃತೋತ್ಪತ್ತಿಸೆ ನಿತ್ಯ ನಿರಂತರ ರಮ್ಯ
ತೊಟ್ಟು ತೊಟ್ಟಾಗಿ ಗಂಟಲಿಂದ ನರನಾಡಿ
ಆಕ್ರಮಿಸೆಲ್ಲಾ ಪರಿಶುದ್ಧವಾಗೆ ದೇಹವಿಡೀ ||

೧೪೪. ನಿತ್ಯ-ಮುಕ್ತಾ
ನಿರಂತರ ಮುಕ್ತಳಲ್ಲವೆ ಮಾತೆ ಶ್ರೀ ಲಲಿತೆ
ಬ್ರಹ್ಮಲಕ್ಷಣ ಸಾರಿ ಮುಕ್ತಿ ಮಾರ್ಗ ಸಂಹಿತೆ
ಅರಿಯಲ್ಹೇಗೆ ಬ್ರಹ್ಮ, ಅರಿಯದೆ ದೇವಿ ಮನ
ಮುಕ್ತನಾಗದೆ ಇಹ ಬಂಧನ ಸಿಗಲೆಲ್ಲಿ ಜ್ಞಾನ ||

೧೪೫. ನಿರ್ವಿಕಾರ
ಬ್ರಹ್ಮಕೆಲ್ಲಿ ರೂಪಾಂತರ, ರೂಪ ರಹಿತ ಶೂನ್ಯ ಸರೋವರ
ಪುರುಷ ಪ್ರಕೃತಿ ಸಂಯೋಗ ವಿಶ್ವ ಸೃಷ್ಟಿಗೆ ಮುನ್ನುಡಿ ಸ್ವರ
ಬಂಧ ಮುಕ್ತ ಚೈತನ್ಯ ರೂಪಿ ಸೃಷ್ಟಿ ಜ್ಞಾನ ಪುರುಷ ಸ್ಥಿರತೆ
ಸಾಕ್ಷೀಭೂತ ಜತೆ ತ್ರಿಗುಣ ಪ್ರಕೃತಿ ಸೃಷ್ಟಿ ಕಾರಣ ಚಂಚಲತೆ ||

(these 2 paragraphs were dropped from final version since gives incomplete listing – needing another para for completion probably)

ಅಹಂಕಾರ ಮಹತ್ ತನ್ಮಾತ್ರೆಯೈದೂ ಕಾರಣ ವಸ್ತು
ಪಂಚೇಂದ್ರ ಕರ್ಮೇಂದ್ರ ಪಂಚಭೂತ ಮನಸೂ ಕಲೆತು
ಇಪ್ಪತ್ಮೂರು ಕಾರಣ ಕಾರ್ಯವಸ್ತು ಪ್ರಕೃತಿಯ ರಚಿಸೆ
ರೂಪರಹಿತ ಸ್ಥಿರ ಪುರುಷ, ಸೃಷ್ಟಿಗೆ ಪ್ರಕೃತಿ ಜತೆ ಬೆಸೆ ||

ಸಾಂಖ್ಯ ತತ್ವಗಳಿಪ್ಪತ್ಮೂರದರಲಿ ಕಾರಣ ವಸ್ತುಗಳೇಳು
ಶಬ್ದ ರಸ ಗಂಧ ರೂಪ ಸ್ಪರ್ಷ ತನ್ಮಾತ್ರೆ ಜತೆ ಮಹತ್ ಅಹಂಕಾರಗಳು
ಮಹಾನ್ ತತ್ವವೀ ಮಹತ್ ಮೂಲವಾಗಿ ಅಹಂಕಾರ ಮನಸು
ಪಂಚಭೂತ ಪಂಚೇಂದ್ರಿಯ ಕರ್ಮೇಂದ್ರಿಯ ಜತೆಗೂಡಿದ ಸೊಗಸು || )

೧೪೬. ನಿಷ್ಪ್ರಪಂಚಾ
ಅಭಿವೃದ್ಧಿ ವಿಕಸನ ರೂಪಾಂತರ ಪ್ರಪಂಚ ಕರಣ
ಆದಿ-ಅನಾದಿ ಬ್ರಹ್ಮ ಅನಿಯಂತ್ರಣಾ ಪರಿಪೂರ್ಣ
ಇಹ ವಿಮುಕ್ತಿ ಶಾಂತ ಮೂರ್ತಿ ಶುಭ ಸಂಪೂರ್ಣತೆ
ಅದ್ವಿತೀಯತೆ ತುರಿಯಾವಸ್ಥೆ ನಿರ್ಗುಣ ಬ್ರಹ್ಮವಂತೆ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AB%E0%B3%A7-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%AA%E0%B3%A9%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%AA%E0%B3%AC%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/22-6-2013/41222

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 143-146 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-143-146.html

ನಿಮ್ಮ ಟಿಪ್ಪಣಿ ಬರೆಯಿರಿ