೦೧೬೬. ಲಜ್ಜಾ (೭೪೦), ರಂಭಾದಿ-ವಂದಿತಾ (೭೪೧), ಭವ-ದಾವ-ಸುಧಾ-ವೃಷ್ಟಿಃ (೭೪೨), ಪಾಪಾರಣ್ಯ- ದವಾನಲಾ (೭೪೩), ದೌರ್ಭಾಗ್ಯ-ತೂಲ- ವಾತೂಲಾ (೭೪೪) (ಲಲಿತಾ ಸಹಸ್ರನಾಮ ೭೪೦ರಿಂದ ೭೪೪ನೇ ನಾಮಗಳ ವಿವರಣೆ )

೦೧೬೬. ಲಜ್ಜಾ (೭೪೦), ರಂಭಾದಿ-ವಂದಿತಾ (೭೪೧), ಭವ-ದಾವ-ಸುಧಾ-ವೃಷ್ಟಿಃ (೭೪೨), ಪಾಪಾರಣ್ಯ- ದವಾನಲಾ (೭೪೩), ದೌರ್ಭಾಗ್ಯ-ತೂಲ- ವಾತೂಲಾ (೭೪೪) (ಲಲಿತಾ ಸಹಸ್ರನಾಮ ೭೪೦ರಿಂದ ೭೪೪ನೇ ನಾಮಗಳ ವಿವರಣೆ )

೦೧೬೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೭೪೦-೭೪೪
______________________________

೭೪೦. ಲಜ್ಜಾ
ಸ್ತ್ರೀ ಮೂಲ ಗುಣ ಲಜ್ಜಾ, ಹ್ರೀಂ ಬೀಜಾಕ್ಷರ ಲಜ್ಜಾ-ಮಾಯಾ ಬೀಜ
ಆಡಂಬರ ತೋರಿಕೆಯಾರಾಧನೆ ಭಯದೆ ಲಲಿತೆ ನಾಚುತಲೆ ನಿಜ
ಕವಚದೊಳಿಟ್ಟ ಅಂಗದ ಕೂರ್ಮದಂತೆ ನಿಜಭಕ್ತನ ಏಕಾಂತ ಪೂಜ
ಅಂತರಂಗಭಾವ ಕಾಳಜಿ, ವೈಭವಾಡಂಬರ ಗಣಿಸದ ದೇವಿ ಲಜ್ಜಾ ||

೭೪೧. ರಂಭಾದಿ-ವಂದಿತಾ
ಕುಬೇರ ಸಂತತಿ ನಳ ಕುಬೇರನ ಸತಿ ರಂಭೆ ಹೊತ್ತೊಯ್ದ ರಾವಣ
ಶಿವನ ಸತಿ ಗೌರಿ ರಂಭೆಯ ರೂಪ ಮೀರಿಸುವ ಅತಿಶಯ ಧಾರಣ
ಮೂಕ ವಿಸ್ಮಿತ ರಂಭೆ ಊರ್ವಶಿಯಾದಿ ಅಪ್ಸರೆಯರಿಂದ ಪೂಜಿತಾ
ದೇವಲೋಕ ರೂಪ ಖನಿಗಳ ನಿವಾಳಿಸಿ ಲಲಿತೆ ರಂಭಾದಿ ವಂದಿತ ||

೭೪೨. ಭವ-ದಾವ-ಸುಧಾ-ವೃಷ್ಟಿಃ
ಭವ-ಸಂಸಾರ, ದಾವ-ಕಾಳ್ಗಿಚ್ಚು ಲೌಕಿಕಕೆ, ಬೆಂಕಿಯಾರಿಸೆ ಸುಧಾಮೃತ
ಅಜ್ಞಾನ ಕಾಳ್ಗಿಚ್ಚು ಮೈಮರೆಸಿ ಇಹಸುಖ ತಲ್ಲೀನ, ತೆಗೆ ಜ್ಞಾನದಾಮೃತ
ಮಾಯಾ ಅಡವಿಯ ಮೇಲಾಗಿ ವರ್ಷಧಾರೆ, ಅಜ್ಞಾನದ ಮುಸುಕ ಸೃಷ್ಟಿ
ಜ್ಞಾನದ ಬೆಳಕಲಿ ಮುಸುಕ ತೆರೆಸೊ, ಲಲಿತೆ ಭವ-ದಾವ-ಸುಧಾ-ವೃಷ್ಟಿಃ ||

ಭವದಾ-ವಸುಧಾ-ವೃಷ್ಟಿಃ, ಭವನೆನೆ ಶಿವ,ದಾ-ದಾಯಿನಿ ಮುಕ್ತಿ ಪಥಕೆ
ವಸುಧಾ ಸಂಪದ ಮುಕ್ತಿ ಜತೆ ಪ್ರಾಪಂಚಿಕ ಸುಖ ಭುಕ್ತಿಯ ಕೊಡುವಾಕೆ
ಮಾಯೆಯ ಮುಸುಕಲಿ ಯಾತನೆ ಮಳೆಯಲಿ ನೆನೆಸುವ ಅಜ್ಞಾನ ಘನ
ಜ್ಞಾನರ್ಜನೆಯಲಿ ಮುಸುಕಾ ತೊಲಗಿಸಿ ಬೆಳಕಿನೆಡೆಗೆ ನಡೆವ ಜ್ಞಾನಧನ ||

೭೪೩. ಪಾಪಾರಣ್ಯ-ದವಾನಲಾ
ಯಾತನಾ ಕಾರಣ ಪಾಪಗಳ ಅರಣ್ಯ, ಕಾಳ್ಗಿಚ್ಚಂತೆ ಭಸ್ಮ ಲಲಿತಾ ಕಾರಣ
ಶ್ರದ್ಧಾ ಭಕ್ತಿ ಏಕಸಹಸ್ರಾಷ್ಟ ಸಲ ಪಂಚದಶೀ ಮಂತ್ರ, ಪಾಪ ನಾಶ ತಕ್ಷಣ
ಕರ್ಮ ನಿಮಿತ್ತ ಕರ್ತವ್ಯ, ಸರ್ವಶಕ್ತ ಪೋಷಕನಿಗೆಲ್ಲಾ ಸಮರ್ಪಿಸುತ ಬಲ
ಶರಣಾಗತರಿಗೆ ಪಾಪಗಳೆಲ್ಲವ ತೊಡೆವಾ ಲಲಿತೆ ಪಾಪಾರಣ್ಯ ದವಾನಲಾ ||

೭೪೪. ದೌರ್ಭಾಗ್ಯ-ತೂಲ-ವಾತೂಲ
ದೌರ್ಭಾಗ್ಯ ಜನ್ಮ ಸಂಚಿತ ಕರ್ಮ, ಹತ್ತಿಯಂಡಿಗೆ-ತೂಲ ರೂಪದಿ ಯಾತನೆ
ದೇವಿ ಕರುಣೆ ವಾತೂಲ-ಬಿರುಗಾಳಿಯಂತೆ, ತೂಗೆಸೆದು ಬೀಜ ಅರಳೆಯನೆ
ಹಾರುತ ದೂರ ಯಾತನೆ, ಕರ್ಮಸಾಂದ್ರತೆ ಕಡಿತ, ಪ್ರೇರೇಪಿಸಿ ಒಳಿತ ಬಲ
ಪಲ್ಲಟಿಸಿ ಕುಕೃತ್ಯ, ಮುಕ್ತಿ ಪಥ ತೋರಿ ಲಲಿತೆ ದೌರ್ಭಾಗ್ಯ-ತೂಲ-ವಾತೂಲ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A7%E0%B3%AC%E0%B3%AC-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AD%E0%B3%AA%E0%B3%A6%E0%B2%B0%E0%B2%BF%E0%B2%82%E0%B2%A6-%E0%B3%AD%E0%B3%AA%E0%B3%AA%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/23-11-2013/42184

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 740-744 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ: http://www.manblunder.com/2010/05/lalitha-sahasranamam-meaning-740-744.html

ನಿಮ್ಮ ಟಿಪ್ಪಣಿ ಬರೆಯಿರಿ