೦೧೬೭. ಜರಾ-ಧ್ವಾಂತ-ರವಿ-ಪ್ರಭಾ (೭೪೫), ಭಾಗ್ಯಾಬ್ಧಿ-ಚಂದ್ರಿಕಾ (೭೪೬),ಭಕ್ತ-ಚಿತ್ತ-ಕೇಕಿ-ಘನಾ-ಘನಾ (೭೪೭), ರೋಗ-ಪರ್ವತ-ಧಂಭೋಲಿಃ (೭೪೮), ಮೃತ್ಯು-ದಾರು-ಕುಠಾರಿಕಾ (೭೪೯), ಮಹೇಶ್ವರೀ (೭೫೦) (ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ)

೦೧೬೭. ಜರಾ-ಧ್ವಾಂತ-ರವಿ-ಪ್ರಭಾ (೭೪೫), ಭಾಗ್ಯಾಬ್ಧಿ-ಚಂದ್ರಿಕಾ (೭೪೬),ಭಕ್ತ-ಚಿತ್ತ-ಕೇಕಿ-ಘನಾ-ಘನಾ (೭೪೭), ರೋಗ-ಪರ್ವತ-ಧಂಭೋಲಿಃ (೭೪೮), ಮೃತ್ಯು-ದಾರು-ಕುಠಾರಿಕಾ (೭೪೯), ಮಹೇಶ್ವರೀ (೭೫೦) (ಲಲಿತಾ ಸಹಸ್ರನಾಮ ೭೪೫ರಿಂದ ೭೫೦ನೇ ನಾಮಗಳ ವಿವರಣೆ)

೦೧೬೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೭೪೫ – ೭೫೦
_____________________________

೭೪೫. ಜರಾ-ಧ್ವಾಂತ-ರವಿ-ಪ್ರಭಾ
ವೃದ್ಧಾಪ್ಯ ಮರಣ ಭೀತಿ ಅನುಚಿತ, ಪ್ರಕೃತಿ ಸಹಜ ಮುದಿತನ ಖಚಿತ
ದೇವಿ ಕರುಣೆಗೆ ಭಯ ನಿರ್ನಾಮ, ಆತ್ಮಕೆ ಬಟ್ಟೆ ನವ ಶರೀರ ಧರಿಸುತ
ರವಿ ತೊಳೆದಂತೆ ಕತ್ತಲೆ, ವಯಸಿನ ಅಜ್ಞಾನವ ದೂರಾಗಿಸುತ ಸುಲಭ
ತನ್ನಾತ್ಮವರಿಸಿ ಬ್ರಹ್ಮವರಿಸುವ ಪರಿ ಲಲಿತೆ, ಜರಾ-ಧ್ವಾಂತ-ರವಿ-ಪ್ರಭಾ ||

೭೪೬. ಭಾಗ್ಯಾಬ್ದಿ-ಚಂದ್ರಿಕಾ
ಹುಣ್ಣಿಮೆ ಚಂದ್ರನ ಕಂಡಾಗ ಉಕ್ಕೇರುವಂತೆ ಕಡಲಿನ ಅಲೆ
ದೇವಿಯ ದರ್ಶನದಿಂದಲೆ ಏರಿಕೆ ನಿಜ ಭಕ್ತನ ಅದೃಷ್ಟದಲೆ
ಭಾಗ್ಯ ಸಾಗರದ ಬೆಳದಿಂಗಳಾಗಿ ಲಲಿತೆ ಭಾಗ್ಯಾಬ್ದಿಚಂದ್ರಿಕಾ
ಸೂರ್ಯಚಂದ್ರರೆ ದೇವಿಗೆ ಕಣ್ಣು, ಕಾಂತಿ ಕರುಣೆ ಸಮರ್ಪಕ ||

೭೪೭. ಭಕ್ತ-ಚಿತ್ತ-ಕೇಕಿ-ಘನಾ-ಘನಾ
ಮಳೆಯಾಗೊ ಕಪ್ಪನೆ ಮೋಡಕೆ ಗರಿ ಬಿಚ್ಚಿ ನವಿಲ ನರ್ತನ
ಲಲಿತಾಂಬಿಕೆಯ ನೋಡುತಲೆ, ಪರಮಾನಂದ ಭಕ್ತ ಮನ
ನೋಟವೆನೆ ಮನಗಾಣುವಿಕೆ ನಿರಂತರ ಕೃಪೆಯ ಸಂವಹನ
ಶಿವನ ನವಿಲಾಗಿಸಿ ಶೈಲಜೆ, ಭಕ್ತ-ಚಿತ್ತ-ಕೇಕಿ-ಘನಾ-ಘನಾ ||

೭೪೮. ರೋಗ-ಪರ್ವತ-ಧಂಭೋಲಿಃ
ಧಂಭೋಲ-ಸಿಡಿಲಾಗಿ ಶಕ್ತಿಯುತ, ಪರ್ವತಗಳನೆ ಒಡೆಯುತ
ವಜ್ರಾಯುಧದಂತೆ ಶತ್ರು ವಿನಾಶ ಸಾಮರ್ಥ್ಯ ಅನುರಣಿಸುತ
ಸರ್ವರುಜಾಪಹಾರಿಣಿ ಲಲಿತೆ, ರೋಗಪರ್ವತ ಸಿಡಿಲಾಗಿ ಬಲಿ
ಭಕ್ತರ ರೋಗ ಗುಣಪಡಿಸೊ, ದೇವಿ ರೋಗ-ಪರ್ವತ-ಧಂಭೋಲಿಃ ||

೭೪೯. ಮೃತ್ಯು-ದಾರು-ಕುಠಾರಿಕಾ
ಮರಣ ಭಯ ಕಾಡೆ ಮಾನವನ, ಬ್ರಹ್ಮಕದು ಬರಿ ವ್ಯಂಜನ
ದೇವಿಯ ನಂಬೇ ಭಕ್ತರಿಗೆ, ಕಾಡದ ಮರಣ ಭೀತಿ ಯಾತನ
ಅಜ್ಞಾನ ಅಹಂಕಾರ ಅರಿಷಡ್ವರ್ಗಾದಿಗಳಿಂದ ಯಾತನೆ ಲೆಕ್ಕ
ಮೃತ್ಯು ವೃಕ್ಷಕೆ ಕೊಡಲಿ ಲಲಿತೆ, ಮೃತ್ಯು-ದಾರು-ಕುಠಾರಿಕಾ ||

೭೫೦. ಮಹೇಶ್ವರೀ
ಮಹೇಶ್ವರ ಶಿವನ ಅರ್ಧಾಂಗಿಯಾಗಿ, ಶಕ್ತಿ ಮಹೇಶ್ವರೀ
ಅರ್ಧ ನಾರೀಶ್ವರಿಯಾಗೀ ಏಕತ್ವದಲಿಹ ಲಲಿತಾ ಪರಿ
ಬ್ರಹ್ಮದಾಜ್ಞಾನುಸಾರ ಜಗ ಪಾಲಿಸೊ ಪರಮೋನ್ನತತೆ
ದೇವಿಗಷ್ಟೆ ಸುಲಲಿತ, ತ್ರಿಕಾರ್ಯ ನಿಭಾಯಿಸಿ ಶ್ರೇಷ್ಠತೆ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A7%E0%B3%AC%E0%B3%AD-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AD%E0%B3%AA%E0%B3%AB%E0%B2%B0%E0%B2%BF%E0%B2%82%E0%B2%A6-%E0%B3%AD%E0%B3%AB%E0%B3%A6%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/24-11-2013/42194

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 745-750 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ: http://www.manblunder.com/2010/05/lalitha-sahasranamam-745-750.html

ನಿಮ್ಮ ಟಿಪ್ಪಣಿ ಬರೆಯಿರಿ