೦೦೫೯. ನಿರಪಾಯಾ (೧೮೬), ನಿರತ್ಯಯಾ (೧೮೭), ದುರ್ಲಭಾ (೧೮೮), ದುರ್ಗಮಾ (೧೮೯), ದುರ್ಗಾ (೧೯೦), ದುಃಖ ಹಂತ್ರೀ (೧೯೧), ಸುಖಪ್ರದಾ (೧೯೨) (ಶ್ರೀ ಲಲಿತಾ ಸಹಸ್ರನಾಮ ೧೮೬ರಿಂದ ೧೯೨ನೇ ನಾಮಗಳ ವಿವರಣೆ)

೦೦೫೯. ನಿರಪಾಯಾ (೧೮೬), ನಿರತ್ಯಯಾ (೧೮೭), ದುರ್ಲಭಾ (೧೮೮), ದುರ್ಗಮಾ (೧೮೯), ದುರ್ಗಾ (೧೯೦), ದುಃಖ ಹಂತ್ರೀ (೧೯೧), ಸುಖಪ್ರದಾ (೧೯೨) (ಶ್ರೀ ಲಲಿತಾ ಸಹಸ್ರನಾಮ ೧೮೬ರಿಂದ ೧೯೨ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೧೮೬ – ೧೯೨
_____________________________

೧೮೬. ನಿರಪಾಯಾ
ವಿನಾಶರಾಹಿತ್ಯತೆ ಪರಬ್ರಹ್ಮ ಮೂಲ ಲಕ್ಷಣ
ಅಪಾಯಗಳೆಲ್ಲವ ಮೀರಿದ, ಬ್ರಹ್ಮ ನಿರ್ಗುಣ
ವಿನಾಶಾತೀತ ದೇವಿಯೆ ನಿರಪಾಯಾ ಲಲಿತೆ
ನಾಶ ವಿನಾಶ ಮರಣಾ ಬ್ರಹ್ಮದಿಂದಲೆ ಬಂತೆ ||

೧೮೭. ನಿರತ್ಯಯಾ
ಮಿತಿ ದಾಟದ ವೃತ್ತಿ ಪರತೆ, ಸರ್ವದಾ ಕರ್ತವ್ಯ ನಿರತೆ
ಭಗವಂತನ ನಿಯಮದೆ ಕರ್ಮ ಕಾರ್ಯ ನಿರ್ವಹಿಸುತೆ
ಮಾದರಿಯಾಗುತೆ ಮಾಡೆಲ್ಲ ಕರ್ಮ ಪರಿಪಾಲನೆ ಸದಾ
ಅನುಕರಿಸೆ ಪ್ರೇರೇಪಿಸಿ ಜಗವ ಮುನ್ನಡೆಸುವ ನಿರತ್ಯಯಾ ||

೧೮೮. ದುರ್ಲಭಾ
ಅಂತರಿಕ ಹುಡುಕಾಟಾನ್ವೇಷಣೆಗಷ್ಟೆ ಲಭ್ಯಳು ಲಲಿತೆ
ಬಾಹ್ಯಾಚರಣೆ ಮೀರಿದ ನಿಷ್ಠೆ ಧ್ಯಾನಗಳವಿರತ ಬದ್ಧತೆ
ಉನ್ನತ ಪ್ರಜ್ಞೆಗೆ ಶ್ರಮಿಸುತ, ಗಳಿಸಿದರಷ್ಟೆ ಸಾಕ್ಷಾತ್ಕಾರ
ಕಾಠಿಣ್ಯಗಮ್ಯ ಲಲಿತೆ ಕೃಪೆಯಿಡೆ, ಹೂವ್ವಂತೆ ಪರಿಹಾರ ||

೧೮೯. ದುರ್ಗಮಾ
ಕಠಿಣ ಸಾಧನೆಯತನಕ ದುರ್ಗಮಾ ಒಲಿಯಳೆ ದೇವಿ
ಸ್ಥೂಲ ರೂಪದ ಪೂಜೆ ಮೊದಲ ಮೆಟ್ಟಿಲಾಗಿಸಿ ತಡವಿ
ಹಂತಂತ ಮೇಲೇರಿಸಿ ಸೂಕ್ಷ್ಮ ಕಾಮಕಲಾರೂಪ ಪೂಜೆ
ಸೂಕ್ಷಾತಿಸೂಕ್ಷ್ಮ ಧ್ಯಾನ ಜಾಗೃತಿ ಕುಂಡಲಿನಿ ಜತೆ ಹೆಜ್ಜೆ ||

೧೯೦. ದುರ್ಗಾ
ಸದೃಢ ಮಾನಸಿಕತೆ ದೇಹ ಸೌಷ್ಟವ ಬೇಕು ಕಾಣೆ ದೇವಿಯ
ಮಾನಸಿಕ ಭೌತಿಕ ಕಾಪಿಡೊ ಕ್ರಿಯ, ತೆರೆಸಿಡುವ ಆಂತರ್ಯ
ಶತಾಕ್ಷರೀ ಗಾಯತ್ರಿ ಮೃತ್ಯುಂಜಯ ದುರ್ಗಾಸೂಕ್ತಿ ನಿರಂತರ
ಪಠಿಸಿದರೆ ಪರಿಹರಿಸುವಳು ಲಲಿತೆ, ಸಂಕಷ್ಟಗಳೆಲ್ಲಾ ದೂರ ||

೧೯೧. ದುಃಖ ಹಂತ್ರೀ
ತಾವರೆಯೆಲೆಗಂಟದ ನೀರಾಗಿರೆ ಭೌತಿಕ ಜಗದೆ ಭಕ್ತ
ತೊಡೆದೆಸೆಯುವಳು ಯಾತನೆ,ದುಃಖ ದೇವೀ ಲಲಿತ
ಭೌತಿಕ ಕಾಮ ಮೋಹ ಭಾಧಿಸೆ, ಸಂಸಾರದ ದುಃಖ
ಸಾಗರದಿ ಮುಳುಗಿಸದೆ ಈಜಿಸಿ, ದಡ ಸೇರಿಸೊ ಲೆಕ್ಕ ||

೧೯೨.ಸುಖಪ್ರದಾ
ದುಃಖವಿಲ್ಲದ ಶೇಷ, ಕೊನೆಗುಳಿಯುವುದೆ ಸಂತೋಷ
ಅರ್ಹ ಭಕ್ತಗೆ ಸುಖಪ್ರದಾ ದಯಪಾಲಿಸಿ ಅಮಿತಾರ್ಷ
ಮಾಧುರ್ಯರುಚಿ ಮೂಲವರಿತ ಭಕ್ತ ಆನಂದ ಅಪಾರ
ಆಯ್ಕೆ ಕರ್ಮಾನುಸಾರ ಸಾಧಕಗಿರೆ ಜ್ಞಾನಸಾಕ್ಷಾತ್ಕಾರ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AB%E0%B3%AF-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A7%E0%B3%AE%E0%B3%AC%E0%B2%B0%E0%B2%BF%E0%B2%82%E0%B2%A6-%E0%B3%A7%E0%B3%AF%E0%B3%A8%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/5-7-2013/41317

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 186-192 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/09/lalitha-sahasranamam-186-192.html

ನಿಮ್ಮ ಟಿಪ್ಪಣಿ ಬರೆಯಿರಿ