೦೦೬೨. ಮಾಹೇಶ್ವರೀ (೨೦೮), ಮಹಾದೇವೀ(೨೦೯), ಮಹಾಲಕ್ಷ್ಮೀ(೨೧೦), ಮೃಡಪ್ರಿಯಾ(೨೧೧), ಮಹಾ-ರೂಪಾ(೨೧೨), ಮಹಾಪೂಜ್ಯಾ (೨೧೩) (ಶ್ರೀ ಲಲಿತಾ ಸಹಸ್ರನಾಮ ೨೦೮ರಿಂದ ೨೧೩ನೇ ನಾಮಗಳ ವಿವರಣೆ)

೦೦೬೨. ಮಾಹೇಶ್ವರೀ (೨೦೮), ಮಹಾದೇವೀ(೨೦೯), ಮಹಾಲಕ್ಷ್ಮೀ(೨೧೦), ಮೃಡಪ್ರಿಯಾ(೨೧೧), ಮಹಾ-ರೂಪಾ(೨೧೨), ಮಹಾಪೂಜ್ಯಾ (೨೧೩)(ಶ್ರೀ ಲಲಿತಾ ಸಹಸ್ರನಾಮ ೨೦೮ರಿಂದ ೨೧೩ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೨೦೮ – ೨೧೩
__________________________________

೨೦೮. ಮಾಹೇಶ್ವರೀ
ಓಂಕಾರಾತೀತ ಪರಮೋನ್ನತ ಶಿವರೂಪ ಮಾಹೇಶ್ವರ
ಸತ್ವ ರಜೋ ತಮೋ ತ್ರಿಗುಣಾತೀತ ಶಿವ ಲಿಂಗಾಕಾರ
ಶ್ರೀಚಕ್ರ ಸಮಾನ ಲಿಂಗರೂಪದಿ ಸರ್ವದೇವ ಉಪಸ್ಥಿತ
ಶಿವಸತಿ ಶಿವನದೊಂದು ರೂಪ ಮಾಹೇಶ್ವರಿ ಶ್ರೀಲಲಿತ ||

೨೦೯. ಮಹಾದೇವೀ
ಶೀತಲ ಚತುರ ಚಂದ್ರಮ ಶಿವಶಕ್ತಿ ಮುಕುಟಾಭರಣ
ಶಿವನಷ್ಟಮ ವಿಶ್ವ ರೂಪ ಮಹಾದೇವ ಚಂದ್ರಾಭರಣ
ಮಹಾದೇವನ ಅರ್ಧಾಂಗಿ ಮಹಾದೇವೀ ಶ್ರೀ ಲಲಿತ
ಅತ್ಯುನ್ನತಕು ಮಹಾ ಪರಮೋನ್ನತವೆ ಶ್ರೀದೇವಿ ವ್ರತ ||

೨೧೦. ಮಹಾಲಕ್ಷ್ಮೀ
ಸ್ಥಿತಿಕಾರಕ ರೂಪದ ವಿಷ್ಣು, ಘನ ಸತಿ ಮಹಾಲಕ್ಷ್ಮೀ
ಸರ್ವಗುಣ ಸಂಪನ್ನೆ ತ್ರಿಗುಣೆ ಸರ್ವ ಸಂಪದ್ದಾಯಿನಿ
ಪಾಪವಿನಾಶಿನಿ ಸರ್ವಾಂತರ್ಯಾಮಿ ಲಕ್ಷ್ಮೀರೂಪಿಣಿ
ಪೂಜಿಸೆ ತ್ರಯೋದಶಿಗೆ ಶುಭ ಸಂಪದ ಸಂವರ್ಧಿನಿ ||

೨೧೧. ಮೃಡಪ್ರಿಯಾ
ಶಿವ ಸತ್ವ ಗುಣ ಲಕ್ಷಣ ಮೃಡವೆಂದರೆ ಆನಂದ
ದಯೆ ಕೃಪೆ ಕರುಣಾದಿ ಪ್ರತಿಬಿಂಬಿತಾಮೋದ
ಜಗವನೆಲ್ಲ ದೃಷ್ಟಿಸೊ ಶಿವಕಾರುಣ್ಯದ ಮಮತೆ
ಮೃಡ ಕ್ರಿಯಾ ಸಂಪ್ರೀತೆ ಮೆಚ್ಚಿ ಶಿವನಾ ಲಲಿತೆ ||

೨೧೨. ಮಹಾ-ರೂಪಾ
ಜನನ ಮೂಲಕಾರಣ ಸಂಪೂರ್ಣ ವಸ್ತುವೆ ಬ್ರಹ್ಮ
ಪರಾ ಸೃಜಿತ ಭೌತಿಕ ರೂಪವಾಗಿ ಅಪರಾ ಬ್ರಹ್ಮ
ಬ್ರಹ್ಮಾಂತರ್ಗತ ಸೃಷ್ಟಿ-ಸ್ಥಿತಿ-ಲಯ ಪರಮೋನ್ನತ
ನಿಯಂತ್ರಣಾ ಸಮರ್ಥೆ ಮಹಾರೂಪವೆ ಶ್ರೀಲಲಿತ ||

೨೧೩. ಮಹಾಪೂಜ್ಯಾ
ದೇವಾಧಿದೇವತೆಗಳ ಮೀರಿದ ಜ್ಞಾನವಾಗಿ ಮಹತ್ತರ
ಋಷಿ ಮುನಿ ಮಹಾತ್ಮರ ಪೂಜೆ ಯೋಗ್ಯರಿಗೆ ಮಾತ್ರ
ಬ್ರಹ್ಮ ವಿಷ್ಣು ರುದ್ರಾದಿ ತ್ರಿಮೂರ್ತಿಗಳಿಂದಲು ಸೇವಿತ
ರತ್ನಮಣಿಮಾಣಿಕ್ಯದಿಂದರ್ಚಿತ ಮಹಾಪೂಜ್ಯಾ ಲಲಿತ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AC%E0%B3%A8-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A8%E0%B3%A6%E0%B3%AE%E0%B2%B0%E0%B2%BF%E0%B2%82%E0%B2%A6-%E0%B3%A8%E0%B3%A7%E0%B3%A9%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/7-7-2013/41336

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 208-213 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/09/lalitha-sahasranamam.html

ನಿಮ್ಮ ಟಿಪ್ಪಣಿ ಬರೆಯಿರಿ