೦೦೬೬. ಚತುಃ-ಷಷ್ಟ್ಯುಪಚಾರಾಢ್ಯಾ (೨೩೫), ಚತುಃಷಷ್ಟಿ-ಕಲಾಮಯೀ (೨೩೬), ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ (೨೩೭), ಮನು-ವಿದ್ಯಾ (೨೩೮) (ಶ್ರೀ ಲಲಿತಾ ಸಹಸ್ರನಾಮ ೨೩೫ರಿಂದ ೨೩೮ನೇ ನಾಮಗಳ ವಿವರಣೆ)

೦೦೬೬. ಚತುಃ-ಷಷ್ಟ್ಯುಪಚಾರಾಢ್ಯಾ (೨೩೫), ಚತುಃಷಷ್ಟಿ-ಕಲಾಮಯೀ (೨೩೬), ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ (೨೩೭), ಮನು-ವಿದ್ಯಾ (೨೩೮) (ಶ್ರೀ ಲಲಿತಾ ಸಹಸ್ರನಾಮ ೨೩೫ರಿಂದ ೨೩೮ನೇ ನಾಮಗಳ ವಿವರಣೆ)

ಲಲಿತಾ ಸಹಸ್ರನಾಮ ೨೩೫ – ೨೩೮
_________________________________

೨೩೫. ಚತುಃ-ಷಷ್ಟ್ಯುಪಚಾರಾಢ್ಯಾ
ಪೂಜೆ ಆರಾಧನೆಗಳ ಹೆಸರೆ ಉಪಚಾರ
ಅರವತ್ನಾಲ್ಕು ವಿಧದ ಸಾಂಕೇತಿಕ ಸಾರ
ಗಂಧ ಪುಷ್ಪ ಕಂಕಣ ಚಾಮರಾದಿ ಸೇವಿತ
ಚತುಃಷಷ್ಟ್ಯುಪಚಾರಾಢ್ಯಾದೇವಿ ಶ್ರೀಲಲಿತ ||

೨೩೬. ಚತುಃಷಷ್ಟಿ-ಕಲಾಮಯೀ
ಅತೀಂದ್ರಿಯಾಷ್ಟಸಿದ್ದಿ ಶಕ್ತಿಯಿಂದುದ್ಭವಾ ವಿದ್ಯೆ ತಂತ್ರ ಕಲೆ
ಧರ್ಮಾರ್ಥಾಕಾಮ ಪುರುಷಾರ್ಥ ಸಾಧನೆ ಅರವತ್ನಾಲ್ಕಲೆ
ಬ್ರಹ್ಮಾಂಡವೆ ಭ್ರಮಾಧೀನ ಐಹಿಕ ಸಿದ್ದಿಗಷ್ಟೇ ಸೀಮಿತ ಕಲೆ
ನಾಲ್ಕನೆ ಪುರುಷಾರ್ಥ ಮುಕ್ತಿ ಸಹಿತ ಎಲ್ಲ ಪಂಚದಶಿಯಲೆ ||

೨೩೭. ಮಹಾ-ಚತುಃ-ಷಷ್ಠಿ-ಕೋಟಿ-ಯೋಗಿನೀ-ಗಣ-ಸೇವಿತಾ
ಬ್ರಾಹ್ಮೀ-ಮಾಹೇಶ್ವರೀ-ಕೌಮಾರೀ-ವೈಷ್ಣವೀ-ವಾರಾಹೀ-ಇಂದ್ರಾಣೀ
ಚಾಮುಂಡಾ ಮಹಾಲಕ್ಷ್ಮೀ ಅಷ್ಟಮಾತೃಕಾ ಲಲಿತಾ ಬಹುರೂಪಿಣೀ
ಪ್ರತಿ ಮಾತೃಕೆ ನೆರವಿಗೆ ಅಷ್ಟಯೋಗಿನಿ ಕೋಟಿ ಪರಿಚಾರಿಕೆಸಹಿತ
ದೇವಿ ಲಲಿತಾಂಬಿಕೆ ಚತುಃ ಷಷ್ಠಿ ಕೋಟಿ ಯೋಗಿನೀ ಗಣ ಸೇವಿತಾ ||

೨೩೮. ಮನು-ವಿದ್ಯಾ
ದ್ವಾದಶಾ ತರ ಪಂಚದಶೀ ಮಂತ್ರ ಮನು ಕುಬೇರ ಚಂದ್ರ ಲೋಪಾಮುದ್ರಾ
ಅಗಸ್ತ್ಯ ಮನ್ಮಥ ಅಗ್ನಿ ಸೂರ್ಯ ಇಂದ್ರ ಸ್ಕಂದ ಶಿವ ದೂರ್ವಾಸ ಏಕಾಧಾರ
ಶ್ರೀ ವಿದ್ಯಾರಾಧನೆಗೆ ಮೂಲ ಪಂಚದಶೀ ಮಂತ್ರ ಶ್ರೀ ಚಕ್ರದೆ ಮನು ಪೂಜಿತ
ದ್ವಾದಶದಲಿ ಮೊದಲಾಗಿ ಮನು-ವಿದ್ಯಾ ಲಲಿತೆಯ ಓಲೈಸೊ ಮನೋಗತ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%AC%E0%B3%AC-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%A8%E0%B3%A9%E0%B3%AB%E0%B2%B0%E0%B2%BF%E0%B2%82%E0%B2%A6-%E0%B3%A8%E0%B3%A9%E0%B3%AE%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/12-7-2013/41358

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 235-238 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ: http://www.manblunder.com/2009/09/lalitha-sahasranamam-235-238.html

ನಿಮ್ಮ ಟಿಪ್ಪಣಿ ಬರೆಯಿರಿ